ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಅಮಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ತಂತ್ರಜ್ಞಾನದ ಮಾಹಿತಿ ಇದ್ದವರು, ಇಲ್ಲದವರು ಕೂಡ ಹಣ ಕಳೆದುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ಕೂಡ ಅಲರ್ಟ್ ಆಗಿದ್ದು, ಜನರಿಗೆ ವಂಚನೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ, ಎಚ್ಚರಿಕೆಯಿಂದ ಇರುವಂತೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ.
ಈಗ ನಿಮ್ಮ ಮೊಬೈಲ್ ನ್ನು ಸೈಬರ್ ಹಂತಕರು ನೋಡುತ್ತಿದ್ದಾರೆ ಎಂಬುವುದನ್ನು ನೀವೇ ತಿಳಿದುಕೊಳ್ಳಬಹುದಾಗಿದೆ. ಇತ್ತೀಚಿಗೆ UNSW ಮತ್ತು ಆಕ್ಸ್ಫರ್ಡ್ ಯೂನಿವರ್ಸಿಟಿ ಬಿಡುಗಡೆ ಮಾಡಿದ ವರದಿಯಂತೆ ಭಾರತವು ಸೈಬರ್ ವಂಚನೆಗೆ ಒಳಗಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅಲ್ಲದೇ, ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇದು ಆತಂಕಕ್ಕೆ ಕಾರಣವಾಗುತ್ತಿದೆ.

ಕರೆಯ ಮೂಲಕ, ಸಂದೇಶಗಳ ಮೂಲಕ ಸರ್ಕಾರದ ಅಧಿಕೃತ ಸಂಸ್ಥೆ ಎಂದು ಹೇಳಿಕೊಂಡು, ಬಹುಮಾನದ ವಿಜೇತರ ಹೆಸರಲ್ಲಿ, ಕೆವೈಸಿ, ಆಧಾರ್ ಅಪ್ಡೇಟ್ ಸೇರಿದಂತೆ ಹಲವಾರು ವಿಧಾನಗಳ ಮೂಲಕ ಜನರನ್ನು ವಂಚಕರು ಟ್ರ್ಯಾಪ್ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೇ, ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡುವ ಕೆಲುವ ಫೈಲ್ಸ್ ಗಳ ಸಹಾಯದಿಂದ ಕೂಡ ವಂಚಕರು ವಂಚಿಸುತ್ತಿದ್ದಾರೆ. ಇವುಗಳ ಮೂಲಕ ನಮ್ಮ ಮೊಬೈಲ್ ನಂಬರ್ ಫಾರ್ವಾರ್ಡೆಡ್ ಮಾಡಿಸಿಕೊಂಡು ಒಟಿಪಿ ಸ್ವೀಕರಿಸಿ ನಮ್ಮ ಖಾತೆಗೆ ಕನ್ನ ಹಾಕುತ್ತಿದ್ದಾರೆ.
ಹೀಗಾಗಿ ಇದನ್ನು ಪರೀಕ್ಷಿಸಲು *#67# ಎಂಬ ಕೋಡ್ ಗೆ ನೀವು ಕರೆ ಮಾಡಬೇಕು. ಅಲ್ಲಿ not forwaded ಎಂದು ಬಂದರೆ, ನೀವು ಸೇಫ್ ಆಗಿದ್ದಂತೆ. ಒಂದು ವೇಳೆ forwarded ಅಂತ ಇದ್ದರೆ ತಕ್ಷಣ #002# ಕರೆ ಮಾಡಬೇಕು. ಯಾವುದೆಲ್ಲ ಫಾರ್ವಾರ್ಡೆಡ್ ಆಗಿದೆಯೋ ಅದನ್ನು ಸ್ಥಗಿತಗೊಳಿಸುತ್ತಾರೆ. ಅಲ್ಲದೇ, ನೀವು ಸೈಬರ್ ಕ್ರೈಮ್ ಬಲೆಗೆ ಬಿದ್ದಿದ್ದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಸಲ್ಲಿಸಬೇಕು.