ಇಂದು ದೇಶದಲ್ಲಿ 6ನೇ ಹಂತದ ಮತದಾನ ನಡೆಯುತ್ತಿದೆ. 58 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
7 ರಾಜ್ಯಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 889 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ. ಬಿಹಾರ – 7, ಹರಿಯಾಣ – 10, ಒಡಿಶಾ – 6, ಉತ್ತರಪ್ರದೇಶ – 14, ಪಶ್ಚಿಮ ಬಂಗಾಳ – 8, ಜಾರ್ಖಂಡ್ – 4, ದೆಹಲಿ – 7 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
6ನೇ ಹಂತದಲ್ಲಿ ಬಿಜೆಪಿಯ ಧರ್ಮೇಂದ್ರ ಪ್ರಧಾನ್, ಹರಿಯಾಣ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್, ಮನೋಜ್ ತಿವಾರಿ, ಬನ್ಸೂರಿ ಸ್ವರಾಜ್, ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ, ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಸೇರಿದಂತೆ ಹಲವರು ಕಣದಲ್ಲಿದ್ದಾರೆ. ಹರಿಯಾಣದಲ್ಲಿ 223 ಗರಿಷ್ಠ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇದೊಂದು ಮತದಾನ ಮುಗಿದ ಮೇಲೆ 7ನೇ ಹಂತದಲ್ಲಿ ಕೊನೆಯ ಮತದಾನ ನಡೆಯಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲ ಪಕ್ಷಗಳ ನಾಯಕರು ಇನ್ನೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.