ಬೆಂಗಳೂರು: ಯುವತಿ ಪ್ರಬುದ್ಧಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅಪ್ರಾಪ್ತ ಸ್ನೇಹಿತನ ಕನ್ನಡಕ ರಿಪೇರಿ ವಿಚಾರದಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅಪ್ರಾಪ್ತ ತನ್ನ ಸ್ನೇಹಿತನ ಕನ್ನಡಕ ಡ್ಯಾಮೇಜ್ ಮಾಡಿದ್ದನು. ಇದನ್ನು ರಿಪೇರಿ ಮಾಡಿಸಿಕೊಡುವಂತೆ ಸ್ನೇಹಿತ ಪಟ್ಟು ಹಿಡಿದಿದ್ದ. ಹೀಗಾಗಿ ಅಪ್ರಾಪ್ತ ಅಪ್ರಾಪ್ತನು ಪ್ರಬುದ್ಧಾ ಮನೆಗೆ ತೆರಳಿ ಅವರ ಪರ್ಸ್‍ನಿಂದ 2 ಸಾವಿರ ರೂ. ಎಗರಿಸಿದ್ದಾನೆ. ಈ ವಿಚಾರ ಪ್ರಭುದ್ಧ್ಯಾ ಗಮನಕ್ಕೆ ಬಂದಿದ್ದು, ಆಕೆ ಬಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಆಗ ಬಾಲಕ, ತಪ್ಪಾಯ್ತು ಕ್ಷಮಿಸಿಬಿಡು ಎಂದು ಕಾಲು ಹಿಡಿದು ಬೇಡಿಕೊಂಡಿದ್ದಾನೆ. ಕಾಲು ಹಿಡಿದ ವೇಳೆ ಪ್ರಬುದ್ಧಾ ಆಯತಪ್ಪಿ ಬಿದ್ದಿದ್ದಾಳೆ.
ಕೆಳಗಡೆ ಬಿದ್ದ ಕಾರಣ ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದು ಮೂರ್ಛೆ ಹೋಗಿದ್ದಾರೆ. ಹೀಗಾಗಿ ಗಾಬರಿಗೊಂಡ ಅಪ್ರಾಪ್ತ ಆತ್ಮಹತ್ಯೆ ಎಂದು ಬಿಂಬಿಸಲು ಯುವತಿಯ ಕೈ ಕುಯ್ದಿದ್ದಾನೆ. ಕೈಯಲ್ಲಿ ರಕ್ತಸ್ರಾವ ಆಗಿ ಪ್ರಬುದ್ಧಾ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಬಹಿರಂಗವಾಗಿದೆ.
ಮೇ 15 ರಂದು 20 ವರ್ಷದ ಪ್ರಭುದ್ಧಾ ಮೃತದೇಹ ಮನೆಯ ಬಾತ್‍ರೂಂನಲ್ಲಿ ಪತ್ತೆಯಾಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದೇ ಪೊಲೀಸರು ಕೂಡ ಭಾವಿಸಿದ್ದರು. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಕೊಲೆಯ ರಹಸ್ಯ ಬೇಧಿಸಿದ್ದಾರೆ.