ಬೆಂಗಳೂರು: 2025-26ನೇ ಸಾಲಿಗೆ ಮಕ್ಕಳ ವಯೋಮಿತಿ ನಿಗದಿ ಮಾಡಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ವಯೋಮಿತಿ (Age limit) 6 ವರ್ಷಕ್ಕೆ ನಿಗದಿ ಮಾಡಿರುವುದು ಮತ್ತು ಎಲ್‌ಕೆಜಿಗೆ (LKG) ದಾಖಲಿಸಲು ಮಕ್ಕಳ ವಯಸ್ಸು ಜೂನ್ 1 ರೊಳಗೆ 4 ವರ್ಷ ಆಗಿರಬೇಕು (2023-24ರ ಶೈಕ್ಷಣಿಕ ವರ್ಷದಿಂದ) ಎಂಬ ನಿಯಮಕ್ಕೆ ಪೋಷಕರಿಂದ (Parents) ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದು ಅವೈಜ್ಞಾನಿಕ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಿಯಮ ಮಕ್ಕಳನ್ನು ಸಕಾಲಿಕ ಶಿಕ್ಷಣದಿಂದ ವಂಚಿತಗೊಳಿಸುತ್ತಿವೆ. ಕೇವಲ ಒಂದು ದಿನದ ಅಂತರದಲ್ಲಿ ವಯಸ್ಸು ಪೂರ್ಣಗೊಂಡಿರದಿದ್ದರೆ ಅಂಥ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಅಂಥ ಮಕ್ಕಳು ಇಡೀ ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಗೊಂದಲಗಳ ಮಧ್ಯೆಯೂ ಇದೀಗ ಖಾಸಗಿ ಶಾಲೆಗಳು ಹೊಸ ನಿಯಮಗಳಿಗೆ ಬದ್ಧವಾಗಿದ್ದು, ವಯಸ್ಸು ಪೂರ್ಣಗೊಂಡಿರದ ಮಕ್ಕಳ ದಾಖಲಾತಿಗೆ ನಿರಾಕರಿಸುತ್ತಿವೆ. ಇದು ಪಾಲಕರ ಬೇಸರಕ್ಕೆ ಕಾರಣವಾಗಿದೆ.