ರಾಮನಗರ: ಪತ್ನಿ ಬೇರೆ ವ್ಯಕ್ತಿಗಳೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾಳೆ ಎಂಬ ಶಂಕೆಯಿಂದ ಪತಿಯು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ(Madhugirihalli) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಶ್ವಿನಿ (27) ಕೊಲೆಯಾದ ಮಹಿಳೆ. ಪತಿ ರಮೇಶ್ (32) ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
ಈ ದಂಪತಿ ಕಳೆದ 10 ವರ್ಷಗಳಿಂದ ವಿವಾಹವಾಗಿದ್ದರು. ಆದರೆ, ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಮೇಲೆ ಅನುಮಾನ ಪಡ್ತಿದ್ದ ಪತಿ ರಮೇಶ್, ಸಂಶಯದಲ್ಲಿ ಜಗಳ ಮಾಡುತ್ತಿದ್ದ. ಹೀಗಾಗಿ ಪತ್ನಿಯು ತವರು ಸೇರಿದ್ದರು. ಭಾನುವಾರ ಮತ್ತೆ ಕರೆದುಕೊಂಡು ಬಂದಿದ್ದ. ನಂತರ ಕುಟುಂಬಸ್ಥರು ಕರೆ ಮಾಡಿದಾಗ ಅಶ್ವಿನಿ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.