ಸತತ ಆರು ಪಂದ್ಯ ಸೋತು, ಹತ್ತನೇ ಸ್ಥಾನಕ್ಕೆ ಕುಸಿದಿದ್ದ ‘ಆರ್ಸಿಬಿ’ ತಂಡ, ಯಾರೂ ಊಹಿಸದ ರೀತಿಯಲ್ಲಿ ಪುಟಿದೆದ್ದು, ಮಿಕ್ಕ ಆರಕ್ಕೆ ಆರು ಪಂದ್ಯವನ್ನೂ ಭರ್ಜರಿಯಾಗಿ ಗೆದ್ದು, ‘ಪ್ಲೇ ಆಫ್’ ಪ್ರವೇಶಿಸಿದೆ. ಪ್ರಬಲ ಎದುರಾಳಿ ‘ಚನೈ’ ತಂಡವನ್ನು ಬಗ್ಗು ಬಡಿದದ್ದು ಕಂಡು, ಅಭಿಮಾನಿಗಳು ‘ಈ ಬಾರಿ ಪಕ್ಕಾ ಕಪ್ ನಮ್ದೆ’ ಎಂದು ಎದೆ ಉಬ್ಬಿಸುತ್ತಿದ್ದಾರೆ. ನಿಜಕ್ಕೂ ಆ ಗೆಲವು ಕಪ್ಪು ಹೊಡೆದಷ್ಟೇ ಖುಷಿ ಕೊಟ್ಟಿದ್ದು ಮಾತ್ರ ಸುಳ್ಳಲ್ಲ!. ಭರ್ಜರಿ ಹುರುಪಿನಲ್ಲಿರುವ ಆರ್ಸಿಬಿ ತಂಡದ ಸಂಘಟಿತ ಆಟವು, ಅಭಿಮಾನಿಗಳ ಬಹು ವರ್ಷಗಳ ಆಸೆಗೆ ಬಲ ನೀಡಿದೆ. ಈ ಹಂತದಲ್ಲಿ ಪ್ಲೇ ಆಫ್ ಎದುರಾಳಿ ‘ರಾಜಸ್ತಾನ್ ರಾಯಲ್ಸ್’ ಜೊತೆಗಿನ ಮುಂದಿನ ಪಂದ್ಯದ ಬಗ್ಗೆ ಒಂದಷ್ಟು ಸಹಜ ಪ್ರಶ್ನೆಗೆ ಉತ್ತರ ಇಲ್ಲಿದೆ.
RCB ಪಂದ್ಯಕ್ಕೆ ಮಳೆ ಬಂದ್ರೆ ಮುಂದೇನು? ಎಂಬ ಆತಂಕದ ಲೆಕ್ಕಾಚಾರಕ್ಕೆ ಉತ್ತರ ಈ ಕೆಳಗಿನಂತಿದೆ.
ಪಂದ್ಯ ಶುರುವಾದ ವೇಳೆ ಮಳೆ ಸುರಿದರೆ, ಇಷ್ಟು ದಿನ ಕೊಟ್ಟಿದ್ದಕ್ಕಿಂತ ‘ಎರಡು ಗಂಟೆಯ ಹೆಚ್ಚುವರಿ ಸಮಯಾವಕಾಶ’ ಕೊಡಲಾಗುತ್ತದೆ. ಹಾಗಾಗಿ, ರಾತ್ರಿ 9.30ರ ತನಕ ಓವರ್ ಗಳಲ್ಲಿ ಯಾವುದೇ ಕಡಿತ ಮಾಡುವುದಿಲ್ಲ. ಇಪ್ಪತ್ತು ಓವರ್ ಪೂರ್ತಿ ಆಡಿಸಲು ಅವಕಾಶ ನೀಡುತ್ತಾರೆ.
ಒಂದು ವೇಳೆ ಪಂದ್ಯ ಮಳೆಯಿಂದಾಗಿ ‘Full day washout’ ಆದ್ರೆ, ‘ರಿಸರ್ವ್ ಡೇ’ ಇರಿಸಲಾಗುತ್ತದೆ.
ಆ ದಿನದಲ್ಲೂ ಮಳೆ ಬಂದ್ರೆ, ಸೂಪರ್ ಓವರ್ ಮೂಲಕ ಆಡಿಸಲು ನೋಡುತ್ತಾರೆ. ಅತಿಯಾದ ಮಳೆಯಿಂದಾಗಿ ‘ರಿಸರ್ವ್ ಡೇ’ ಕೂಡ washout ಆದ್ರೆ ‘high rank’ ಅಲ್ಲಿ ಇರುವ ತಂಡವು, ಮುಂದಿನ ಪಂದ್ಯಕ್ಕೆ ‘ಕ್ವಾಲಿಫೈ’ ಆಗಲಿದೆ. ಅಂದ್ರೆ RR qualify ಆಗುತ್ತೆ.! ಹಾಗಾಗದಿರಲಿ! ಅಪರೂಪಕ್ಕೆ ರೊಚ್ಚಿಗೆದ್ದು ಆಡುತ್ತಿರುವ ಆರ್ಸಿಬಿ ತಂಡ, ಅದೇ ಹವಾ ಮುಂದುವರೆಸಿ, ಈ ಬಾರಿಯಾದರೂ ‘ಕಪ್ ಎತ್ತಿ ಹಿಡಿದು’, ಹಲವು ವರ್ಷಗಳಿಂದ ಬಕ ಪಕ್ಷಿಯಂತೆ ಕಾದು ಕುಳಿತಿರುವ ಅಭಿಮಾನಿಗಳ ಮಹದಾಸೆ ಪೂರೈಸುವಂತಾಗಲಿ. ಜೈ RCB.