ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಇಂದು ಮಧ್ಯಾಹ್ನ 3ಕ್ಕೆ ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ- 2 ರಲ್ಲಿ ಒಟ್ಟಾರೆ ಫಲಿತಾಂಶ ಶೇ. 35.25ರಷ್ಟು ಆಗಿದೆ.
ಏಪ್ರಿಲ್ 29 ರಿಂದ ಮೇ 16ರ ವರೆಗೆ ಪರೀಕ್ಷೆಗಳು ನಡೆದಿತ್ತು. ಇಲಾಖೆ ವೆಬ್ ಸೈಟ್ http://karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. 2ನೇ ಪರೀಕ್ಷೆಗೆ ಒಟ್ಟು 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, 52,505 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಾಲಕರು 26,496 (31.31%) ಮತ್ತು 26009 ( 40.44%) ಬಾಲಕಿಯರು ತೇರ್ಗಡೆ ಹೊಂದಿದ್ದಾರೆ.
ಕಲಾ ವಿಭಾಗದಲ್ಲಿ 11589 (22.24%) ವಾಣಿಜ್ಯ ವಿಭಾಗದಲ್ಲಿ 8709 (22.06%) ಹಾಗೂ ವಿಜ್ಞಾನ ವಿಭಾಗದಲ್ಲಿ- 32207 (56.16%) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ-2 ಬರೆದ ವಿದ್ಯಾರ್ಥಿಗಳಲ್ಲಿ ಫಲಿತಾಂಶ ಸುಧಾರಣೆ ಬಯಸಿದ 32,940 ವಿದ್ಯಾರ್ಥಿಗಳು ಇದ್ದಾರೆ. ಅರ್ಜಿ ಸಲ್ಲಿಕೆ ಕೊನೆ ದಿನ ಮೇ 23, ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆ ಕೊನೆ ದಿನ ಮೇ 25 ಆಗಿದೆ.
ಅಲ್ಲದೇ, ಈ ಸಂದರ್ಭದಲ್ಲಿ ಪರೀಕ್ಷೆ-3ಗೆ ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಕೊನೆ ದಿನ ದಂಡ ರಹಿತ ಮೇ 23 ರಿಂದ ಮೇ 28 ಹಾಗೂ ದಂಡ ಸಹಿತ ಮೇ 29 ರಿಂದ ಮೇ 30 ಆಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ 3ಗೆ ವೇಳಾಪಟ್ಟಿ ಪ್ರಕಟ ಮಾಡಿದ್ದು, ಜೂನ್ 26 ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ -1 ರಲ್ಲಿ 5,52,690 ವಿದ್ಯಾರ್ಥಿಗಳು ತೇರ್ಗೆಡೆ ಹೊಂದಿದ್ದರು.