ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಅರೆಸ್ಟ್ ವಾರೆಂಟ್ ಪಡೆದಿದೆ. ಆದರೆ, ಪ್ರಜ್ವಲ್ ಮಾತ್ರ ವಿದೇಶದಲ್ಲಿ ತಲೆ ಮರೆಸಿ ಕುಳಿತುಕೊಂಡಿದ್ದಾನೆ. ಇದರ ಮಧ್ಯೆ ಎಸ್ ಐಟಿ ಪಾಸ್ ಪೋರ್ಟ್ ರದ್ದು ಮಾಡಲು ಮುಂದಾಗಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿಯ ಎಸ್‍ಐಟಿಯು ಪಾಸ್‍ಪೋರ್ಟ್ ರದ್ದಿಗೆ ಕೇಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ. ಕೂಡಲೇ ಪ್ರಜ್ವಲ್ ಹೊಂದಿರುವ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದೆ. ಪ್ರಜ್ವಲ್ ವಿರುದ್ಧ ಹೊರಡಿಸಿರೋ ಕೋರ್ಟ್ ಹೊರಡಿಸಿರೋ ಆದೇಶದ ಮಾಹಿತಿ ಲುಕೌಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಜೊತೆಯಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿರೋ ದೂರು ಎಲ್ಲ ಮಾಹಿತಿಯನ್ನು ಕೂಡ ಅದರೊಂದಿಗೆ ಲಗತ್ತಿಸಲಾಗಿದೆ.
ನಿನ್ನೆಯಷ್ಟೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ದರೆ 48 ಗಂಟೆಯೊಳಗೆ ಶರಣಾಗು ಎಂದಿದ್ದರು.