ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿವೆ. ಸರ್ಕಾರದ ಬಗ್ಗೆ ಜನರಲ್ಲಿಯೂ ಮಿಶ್ರ ಪ್ರತಿಕ್ರಿಯೆ ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಸಾಧನೆಯ ಬಗ್ಗೆ ಹೇಳಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಲು ಸಂಪೂರ್ಣ ವಿಫಲವಾಗಿದೆ. ಅದನ್ನು ನೇಣಿಗೆ ಹಾಕಬೇಕು ಎಂದು ಆರೋಪಿಸಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆ ಪೂರ್ವ ಐದು ಪ್ರಮುಖ ಗ್ಯಾರಂಟಿಗಳ ಭರವಸೆ ನೀಡಿದಂತೆ ಅವುಗಳನ್ನು ಈಡೇರಿಸಿದ್ದೇವೆ. ಯಾವುದೆ ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ಐದು ಗ್ಯಾರೆಂಟಿ ತಲುಪಿದೆ. ಐದು ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ಖರ್ಚು ಮಾಡಿದ್ದೇವೆ.
ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಕೇಂದ್ರ ಸಹಕರಿಸಲಿಲ್ಲ. ಭಾರತದ ಆಹಾರ ನಿಗಮದಲ್ಲಿ ದಾಸ್ತಾನು ಇದ್ದರೂ ಅಕ್ಕಿ ಕೊಡಲು ನಿರಾಕರಿಸಿದರು. ಒಂದು ಕೆಜಿ ಅಕ್ಕಿಗೆ 34 ರೂ. ಕೊಡುತ್ತೇವೆ ಅಂತ ಬರವಣಿಗೆ ಮೂಲಕ ಕೊಟ್ಟೆವು. ಆದರೂ ಅಕ್ಕಿ ಕೊಡಲಿಲ್ಲ. ನಂತರ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಬಳಿ ಅಕ್ಕಿ ನೀಡುವಂತೆ ಮನವಿ ಮಾಡಿದ್ವಿ. ಆದರೂ ಅಕ್ಕಿ ಸಿಗಲಿಲ್ಲ. ಸಂಪುಟದಲ್ಲಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕಿದೇವು ಎಂದು ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂತು. ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಕೊಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ 9 ತಿಂಗಳೊಳಗೆ 5 ಗ್ಯಾರಂಟಿ ಜಾರಿಯಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ 1 ಕೋಟಿ 20 ಲಕ್ಷ ಮನೆ ಯಜಮಾನಿಯರಿಗೆ ನೇರವಾಗಿ ಖಾತೆಗಳಿಗೆ ಹಣ ಹಾಕಲಾಗುತ್ತಿದೆ ಎಂದರು. ಗೃಹ ಜ್ಯೋತಿ ಅಡಿಯಲ್ಲಿ 1 ಕೋಟಿ 60 ಲಕ್ಷ ಜನರಿಗೆ ಫ್ರೀ ಕರೆಂಟ್ ಕೊಡುತ್ತಿದ್ದೇವೆ. ಜೂ.11 ರಂದು ಶಕ್ತಿ ಯೋಜನೆ ಜಾರಿ ಮಾಡಿದ್ವಿ. ಶಕ್ತಿ ಯೋಜನೆ ಏಪ್ರಿಲ್ ಕೊನೆಯವರೆ 21 ಕೋಟಿ 33 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದಾರೆ. 4857 ಕೋಟಿ ಖರ್ಚು ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 4 ಕೋಟಿ 10 ಲಕ್ಷ ಫಲಾನುಭವಿಗಳಿಗೆ 5754.6 ಕೋಟಿ ಹಣ ವರ್ಗಾವಣೆ ಮಾಡಿದ್ದೇವೆ.
1.60 ಕೋಟಿ ಜನರಿಗೆ ಗೃಹಜ್ಯೋತಿ ಯೋಜನೆಯಡಿ ಫ್ರೀ ಕರೆಂಟ್ ನೀಡಿದ್ದೇವೆ. ಇದಕ್ಕೆ 3436 ಕೋಟಿ ರೂ. ಖರ್ಚು ಆಗಿದೆ. ಗೃಹಲಕ್ಷ್ಮಿ 1 ಕೋಟಿ 20 ಲಕ್ಷ ಯಜಮಾನಿಯರಿಗೆ 20 ಸಾವಿರ 293 ಕೋಟಿ 49 ಲಕ್ಷ ಖರ್ಚು ಮಾಡಿದ್ದೇವೆ. ಯುವನಿಧಿ ಯೋಜನೆಯಡಿ 1 ಲಕ್ಷದ 53 ಸಾವಿರ ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಿದ್ದೇವೆ. ಯುವಕರಿಗೆ ಕೌಶಲ್ಯಭೀವೃದ್ಧಿ ಇಲಾಖೆಯಿಂದ ಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದು ಸರ್ಕಾರದ ಸಾಧನೆಯ ಬಗ್ಗೆ ಕೊಂಡಾಡಿದರು.
ಸರ್ಕಾರದ ಸಾಧನೆ ಶೂನ್ಯ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರದಲ್ಲಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಒಂದು ರಸ್ತೆ ದುರಸ್ತಿ ಕಾಣುತ್ತಿಲ್ಲ, ಯಾವುದೇ ನೀರಾವರಿ ಯೋಜನೆ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ. ಮಳೆಗಾಲದಲ್ಲಿ ತೊಂದರೆಗೊಳಗಾಗುವ ಪ್ರದೇಶಗಳಲ್ಲಿ ಸೇತುವೆಗಳನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಂಡಿಲ್ಲ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.
ಇನ್ನೂ ಸಿದ್ದರಾಮಯ್ಯನವರು ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿ, 18,198 ಕೋಟಿ 34 ಲಕ್ಷ ನೀರಾವರಿಗೆ ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ 9727 ಕೋಟಿ ರೂ. ಅನುದಾನ ಬಜೆಟ್ನಲ್ಲಿ ಘೋಷಣೆ ಮಾಡಿದ್ದೇವೆ. 9601 ಕೋಟಿ ಖರ್ಚು ಮಾಡಿದ್ದೇವೆ.
ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಕಣ್ಣು ತೆರೆಸಲು ಯತ್ನಿಸಿದ ಆರ್. ಅಶೋಕ್, ಸಾಕಷ್ಟು ಶಾಲಾ ಕಟ್ಟಡಗಳಿಗೆ ತುರ್ತು ಕಾಯಕಲ್ಪದ ಅವಶ್ಯಕತೆಯಿದೆ. ಈ ವರ್ಷ ಯಾವುದೇ ಶಾಲೆಯ ದುರಸ್ತಿ ಕಾರ್ಯ ನಡೆಯಲ್ಲ ಅಂತ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಹೇಳಿದ್ದಾರಂತೆ ಎಂದು ಆರೋಪಿಸಿದ್ದಾರೆ.
ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಕೇಳಿದರೆ, ಸರ್ಕಾರದ ಮಂತ್ರಿಗಳು ಮತ್ತು ಶಾಸಕರು, ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೀವಲ್ಲ, ಅದರಲ್ಲೇ ಎಲ್ಲ ಸರಿಮಾಡಿಕೊಳ್ಳಬೇಕೆಂದು ಧಿಮಾಕು ಪ್ರದರ್ಶಿಸುತ್ತಾರಂತೆ ಎಂದು ಆರೋಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಮಾಡಿದ ಸಹಾಯದ ಕುರಿತು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ 50 ಲಕ್ಷದಿಂದ 1 ಕೋಟಿಯವರಿಗೆ ಕಾಂಟ್ರ್ಯಾಕ್ಟ್ನಲ್ಲಿ ಮೀಸಲಾತಿ ನೀಡಲಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದವರ ಆ್ಯಕ್ಟ್ ಮಾಡಿದ್ದೇವೆ. 1994ರಲ್ಲಿ ಶೇ 4 ರಷ್ಟು ಮೀಸಲಾತಿಯನ್ನ ಮುಸಲ್ಮಾನರಿಗೆ ಕೊಡಲಾಗಿದೆ. ಪ್ರವರ್ಗ 1 ಕ್ಕೆ ಶೇ 5 ರಷ್ಟು, ಮೀಸಲಾತಿ, ಪ್ರವರ್ಗ 2ಕ್ಕೆ ಶೇ15 ರಷ್ಟು, 2 (ಬಿ) ಗೆ ಶೇ 4 ರಷ್ಟು, 3 (ಬಿ)ಗೆ ಶೇ 4 ರಷ್ಟು, 3 (ಎ) ಮತ್ತು (ಬಿ) ಗೆ ಶೇ 4 ರಷ್ಟು ಮೀಸಲಾತಿ ಇದೆ. ಅದಕ್ಕಾಗಿಯೇ 2 ಬಿ ಮೀಸಲಾತಿ ಮುಸಲ್ಮಾನರಿಗೆ ಕೊಡಲಾಗಿದೆ. ಇದು 30 ವರ್ಷಗಳಿಂದಲೂ ಜಾರಿ ಇದೆ ಎಂದು ಹೇಳಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಇದು ರೈತ ವಿರೋಧಿ ಸರ್ಕಾರ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಅನ್ಯಾಯ ಮಾಡಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣ ಬೇರೆ ಕಡೆ ವರ್ಗಾವಣೆಯಾಗಿದೆ. ಯೋಜನೆಗಳಿಗೆ ಜಾರಿಯಾದ ಕೇಂದ್ರದ ಹಣವನ್ನು ತಡೆ ಹಿಡಿದಿದ್ದಾರೆ. ಎಸ್ ಡಿಆರ್ ಎಫ್ ಹಣ ಎಲ್ಲಿ ಖರ್ಚು ಮಾಡಿದ್ದಾರೆ ಗೊತ್ತಿಲ್ಲ. ಈ ಎಲ್ಲದಕ್ಕೂ ಸರ್ಕಾರ ಉತ್ತರ ಕೊಡಬೇಕು. ಇವರು ಸಾಲ ಮಾಡಿದ್ದಾರೆ ಹೊರತು, ಸಾಧನೆ ಏನೂ ಮಾಡಿಲ್ಲ. ಸರ್ಕಾರದ ಸಂಪೂರ್ಣ ಸಾಧನೆ ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, 2023 ರಲ್ಲಿ 431 ಕೊಲೆ ಆಗಿದ್ದವು. 2023ರಲ್ಲಿ 446 ಕೊಲೆ, 2024ರಲ್ಲಿ 430 ಕೊಲೆಗಳಾಗಿವೆ. ಅಂಕಿ ಅಂಶ ನೋಡಿದಾಗ ಹಿಂದನ ವರ್ಷಗಳಿಗಿಂತ ಕಡಿಮೆ ಆಗಿದೆ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಹೇಳಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಸಿಎಂ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಎಂಬ ಯುವತಿಯರ ಕೊಲೆಯಾಗಿದೆ. ಮುಂದಿನ ದಿನಗಳಲ್ಲಿ ಯಾರ ಕೊಲೆ ಆಗುತ್ತದೆ ಎಂಬ ಭಯ ಶುರುವಾಗಿದೆ. ಕಾಲೇಜಿನಲ್ಲಿ, ಮನೆ ಹೊರಗೆ ಹೋದರೆ ಬದುಕಿ ಬರುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಮಹಿಳೆಯರಲ್ಲಿ ಇಲ್ಲದಂತೆ ಸರ್ಕಾರ ಮಾಡಿದೆ. ಬಸ್, ವಿದ್ಯುತ್ ಫ್ರೀ ಕೊಟ್ಟರೇ ಏನು, ಬದುಕುವ ಅವಕಾಶ ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಜಲಿ ಕೊಲೆ ಹಿಂದೆ ಪೊಲೀಸರ ಲೋಪವೂ ಇದೆ ಅಂತ ಗೃಹ ಸಚಿವರು ಹೇಳಿದ್ದಾರೆ. ಪೊಲೀಸರ ಲೋಪ ಇದೆ ಅಂತ ನೀವೇ ಒಪ್ಪಿಕೊಂಡ ಮೇಲೆ ಸರ್ಕಾರ ನಡೆಸಲು ನಿಮಗೆ ಏನು ಯೋಗ್ಯತೆ ಇದೆ?ಗೃಹ ಸಚಿವರೇ ತಮ್ಮ ವೈಫಲ್ಯ ಒಪ್ಪಿಕೊಂಡಿದ್ದಾರೆ. ಕೊಲೆಗಡುಕರಿಗೆ ನಮ್ಮ ರಾಜ್ಯ ಸ್ವರ್ಗವಾಗುತ್ತಿದೆ. ಹಿಂದುಗಳ ಮಾರಣ ಹೋಮವಾಗುತ್ತಿದೆ. ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿಸಿದ್ದು ಸರ್ಕಾರದ ಸಾಧನೆ. ಹನುಮಾನ ಚಾಲಿಸಾ ಹೇಳಿದರೆ ಹಲ್ಲೆ ಮಾಡುತ್ತಾರೆ. ಲವ್ ಜಿಹಾದ್ ಪ್ರಕರಣ ಹೆಚ್ಚಾಗಿದೆ ಹಲ್ಲೆ ಮಾಡುವುದು ಕೂಡ ಫ್ರೀ ಭಾಗ್ಯನಾ? ಎಂದು ಪ್ರಶ್ನಿಸಿದರು.
ಅಲ್ಲದೇ, ಆಂಬುಲೆನ್ಸ್ ನೌಕಕರರಿಗೆ, ಸರ್ಕಾರ ಬಸ್ ಚಾಲಕರಿಗೆ ವೇತನ ನೀಡುತ್ತಿಲ್ಲ. ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ನೀಡಿಲ್ಲ. ಸರ್ಕಾರದ ಹಣಕಾಸು ಸ್ಥಿತಿ ವೆಂಟಿಲೇಟರ್ನಲ್ಲಿದೆ. ಒಂದು ಲಕ್ಷ ಕೋಟಿ ಸಾಲ ದಾಟಿ ಹೋಗಿದೆ. ಎರಡು ಕೋಟಿ ಸಾಲ ಮಾಡುವಂತಹ ಸ್ಥಿತಿ ಬಂದಿದೆ. ಲೂಟಿ ಸರ್ಕಾರ ಜನರಿಗೆ ಶಿಕ್ಷೆ ಕೊಡುತ್ತಿದೆ.
ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಆಯ್ತು. ಸುರಂಗ ಟನಲ್ ಏನಾಯ್ತು? ದೆಹಲಿಗೆ ಟನಲ್ ಮಾಡಿದ್ದೀರಾ? ಎಲ್ಲಿ ಹೋಯ್ತು ನಿಮ್ಮ ಟನಲ್? ಫುಟ್ ಪಾತ್ ಕ್ಲಿಯರ್ ಅಂದವರು ಏನು ಮಾಡಿದ್ರು?ಸುಲಿಗೆ ಗ್ಯಾರಂಟಿ, ಹೆಣ್ಣುಮಕ್ಕಳಿಗಿಲ್ಲ ಬದುಕುವ ಗ್ಯಾರಂಟಿ. ಬದುಕುವ ಗ್ಯಾರಂಟಿ ಇಲ್ಲದ ಸರ್ಕಾರ. ಈ ಸರ್ಕಾರವನ್ನ ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು. ಅಭಿವೃದ್ಧಿ ಶೂನ್ಯ ಸರ್ಕಾರ, ಕೊಲೆಗಡುಕರ ಸರ್ಕಾರ. ಖಜಾನೆ ಲೂಟಿ ಮಾಡಿ, ಕೊಲೆಗಳ ಸಾಧನೆ, ಬೋಗಸ್ ಸರ್ಕಾರ. ಖಜಾನೆ ಭಾಗ್ಯ ಕೊಟ್ಟಿದ್ದರೆ ಒಳ್ಳೆಯದಾಗುತ್ತಿತ್ತು. ಸ್ವತಃ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಗರಂ ವಿರೋಧ ನಾಯಕರು ಗರಂ ಆಗಿದ್ದಾರೆ. ಆರೋಪ- ಪ್ರತ್ಯಾರೋಪಗಳ ಮಧ್ಯೆ ಸರ್ಕಾರದ ಸಾಧನೆ ಏನು ಎಂಬುವುದನ್ನು ಜನರೇ ಹೇಳಬೇಕಿದೆ.