ನಿನ್ನೆ ರಾತ್ರಿ ನೆಡೆದ ಈ ಅವೃತ್ತಿಯ ತನ್ನ 6ನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ರೋಚಕ ಜಯ ಸಾಧಿಸಿ, 7ನೇ ಎಲಿಮಿನೆಟರ್ ಪಂದ್ಯಕ್ಕೆ ಕಾಲಿಟ್ಟಿದೆ.ಇದರ ನಡುವೆ ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಮ್ ಸ್ಪೀಚ್ನಲ್ಲಿ ಧೋನಿ ಸಿಕ್ಸ್ ಕುರಿತು ಆಡಿದ ಮಾತು ಎಲ್ಲೆಡೆ ವೈರಲ್ ಆಗ್ತಾ ಇದೆ.
ಹೌದು, ನಿನ್ನೆ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ‘ಆರ್ ಸಿಬಿ’ ಪರ 17 ರನ್ ಡಿಫೆಂಡ್ ಮಾಡಲು ಬಂದ ಯಶ್ ದಯಾಳ್ ಯಾರ್ಕರ್ ಎಸೆಯುವ ಪ್ರಯತ್ನದಲ್ಲಿ ಎಡವಿ, ಪುಲ್ಟಾಸ್ ಎಸೆದರು. ಬರಹಕ್ಕಿಂತ ಕಾಯುತ್ತಿದ್ದ ಧೋನಿ, ಆ ಎಸೆತದಲ್ಲಿ ಸೀಸನ್ ನ ಅತೀ ಉದ್ದದ ಸಿಕ್ಸ್ ಬಾರಿಸಿ ಚೆಂಡನ್ನ ಕ್ರೀಡಾಂಗಣದ ಹೊರಭಾಗಕ್ಕೆ ಕಳಿಸಿದರು. ಮೊದಲ ಎಸೆತದಲ್ಲೇ ಸಿಕ್ಸರ್ ಚಚ್ಚಿಸಿಕೊಂಡದ್ದು ಕಂಡು ಆರ್ ಸಿಬಿ ಫ್ಯಾನ್ಸ್ ಹೌಹಾರಿಹೋದರು. ‘ಪಂದ್ಯ ಮುಗಿಸುವ ಧೋನಿ ಛಾತಿ’ ಗೊತ್ತಿದ್ದರಿಂದ ಆರ್ ಸಿಬಿಯ ಗೆಲುವಿನ ಆಸೆ ಹೆಚ್ಚೂ-ಕಮ್ಮಿ ಕುಸಿದು ಕುಳಿತಿತ್ತು. ಆದರೆ, ಅದೃಷ್ಟ ಜೊತೆ ಇದ್ದಿದ್ದರಿಂದ ಮುಂದೆ ನಡೆದದ್ದೆಲ್ಲಾ ಆರ್ ಸಿಬಿಗೆ ಪೂರಕವಾಗಿಯೇ ನಡೆದುಹೋಯ್ತು.
ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋಹಾಗೆ, ಧೋನಿ ಸಿಡಿಸಿದ ಸಿಕ್ಸರ್ ‘ಗ್ರೌಂಡ್’ನ ಹೊರಹೋದ ಕಾರಣಕ್ಕೆ ಬೆಂಗಳೂರಿಗೆ ಬೇರೆ (ಬಳಸಿದ) ಬಾಲ್ ನೀಡಲಾಯಿತು. ಆ ಮೂಲಕ ‘ಯಶ್ ದಯಾಳ್’ಗೆ, ಒದ್ದೆಯಾಗಿರದ ಚೆಂಡು ಸಿಗುತ್ತೆ. ಇದು ಮುಂದಿನ 5 ಎಸೆತದಲ್ಲಿ ಬೌಲಿಂಗ್ ಮಾಡುವಾಗ ಗ್ರಿಪ್ ಮಾಡಲು ಸಹಕರಿಯಾಗುತ್ತೆ.
ಇದರ ಸಂಪೂರ್ಣ ಲಾಭ ಪಡೆದ ದಯಾಳ್ ಸ್ಲೋವರ್ ಎಸೆತೆಗಳನ್ನ ಅಚ್ಚುಕಟ್ಟಾಗಿ ಎಸೆದು ಬೆಂಗಳೂರನ್ನ ಭರ್ಜರಿಯಾಗಿ ಗೆಲ್ಲಿಸಿ ಪ್ಲೇ ಆಫ್ ಗೆ ಕರೆದೋಯ್ದರು.
ಒಟ್ಟಿನಲ್ಲಿ ಧೋನಿಯ ಸಿಕ್ಸರ್ ಆರ್ ಸಿಬಿಗೆ ವರವಾಗಿದ್ಧಂತೂ ಸತ್ಯ. ಇತ್ತ ಶ್ರಮದ ಜೊತೆ ಅದೃಷ್ಟವೂ ಸೇರಿ ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸಿದೆ. ಈ ಬಾರಿಯಾದರೂ ಕಪ್ಪು ನಮ್ಮದಾದೀತು ಎಂಬ ಆಸೆಯಲ್ಲಿ ಅಭಿಮಾನಿಗಳಿದ್ದಾರೆ. ಜೈ ಆರ್ ಸಿಬಿ.