ಲಂಡನ್: ಇಂಗ್ಲೆಂಡ್ (England) ನ ವೇಗಿ ಜೇಮ್ಸ್ ಆಂಡರ್ಸನ್ (James Anderson) ಟೆಸ್ಟ್ ಕ್ರಿಕೆಟ್‍ಗೆ (Cricket) ವಿದಾಯ ಹೇಳಿದ್ದಾರೆ.
ಅವರು ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಆಡಿದ ನಂತರ ವಿದಾಯ ಹೇಳಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಲಾರ್ಡ್ಸ್‌ನಲ್ಲಿ ಬೇಸಿಗೆ ಋತುವಿನ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಎಂದು ಹೇಳಲು ಬಯಸುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ನಾನು ಬಾಲ್ಯದಿಂದಲೂ ನನ್ನಿಷ್ಟದ ಕ್ರಿಕೆಟ್ ಆಡುತ್ತಿದ್ದೆ. 20 ವರ್ಷಗಳ ಸುದೀರ್ಘ ಕಾಲ ಇಂಗ್ಲೆಂಡ್ ಪರ ಆಡಿದ್ದೇನೆ. ಇನ್ನು ಮುಂದೆ ಇಂಗ್ಲೆಂಡ್ ತಂಡದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯುವ ಅವಕಾಶದಿಂದ ವಂಚಿತನಾಗಲಿದ್ದೇನೆ. ನೂತನ ಆಟಗಾರರ ಕನಸುಗಳನ್ನು ನನಸಾಗಿಸಲು ಇದು ಸೂಕ್ತ ಸಮಯ ಮತ್ತು ನಿರ್ಧಾರ ಎಂದು ಹೇಳಿದ್ದಾರೆ. ಕ್ರಿಕೆಟ್ ಜೀವನಕ್ಕೆ ಅಚಲ ಬೆಂಬಲ ನೀಡಿದ ತಮ್ಮ ಕುಟುಂಬಕ್ಕೂ ಆಂಡರ್ಸನ್ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.