ಚೆನ್ನೈ: ಮದುವೆಗೆ ಹೋದವರು ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಬೀಚ್ ನಲ್ಲಿ ನಡೆದಿದೆ. ಮದುವೆಗೆ ತೆರಳಿದ್ದ ಐವರು ವಿದ್ಯಾರ್ಥಿಗಳೇ ಸಾವನ್ನಪ್ಪಿದ್ದಾರೆ. ತಂಜಾವೂರಿನ ಚಾರುಕವಿ, ನೇವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‍ನ ಪ್ರವೀಣ್ ಸ್ಯಾಮ್ ಮತ್ತು ಆಂಧ್ರಪ್ರದೇಶದ ವೆಂಕಟೇಶ್ ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಸಾವನ್ನಪ್ಪಿದ ಎಲ್ಲ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಅವರೆಲ್ಲ ಮದುವೆಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಬೀಚ್ ಗೆ ಬಂದಿದ್ದಾರೆ. ಆಗ ಈ ಘಟನೆ ನಡೆದಿದೆ.
ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಅದನ್ನು ಮುಚ್ಚಲಾಗಿತ್ತು. ಪಕ್ಕದ ತೆಂಗಿನ ತೋಟದಿಂದ ಬೀಚ್‍ಗೆ ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ, ಮೂವರು ಮಹಿಳೆಯರನ್ನು ಘಟನೆಯಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.