ಕಾರವಾರ: ಕರಾವಳಿ ಭಾಗದಲ್ಲಿ ಮಂಗನ ಕಾಯಿಲೆಯ ಹಾವಳಿ ಇನ್ನೂ ಇದ್ದು 5 ವರ್ಷದ ಮಗು ಬಲಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಸಿದ್ದಾಪುರ (Siddapura) ತಾಲೂಕಿನ ಅರೆಂದೂರಿನಲ್ಲಿ 5 ವರ್ಷದ ಹೆಣ್ಣುಮಗು ಮಂಗನಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯವಾಗಿ ಸಾವನ್ನಪ್ಪಿದೆ. ಈ ಮೂಲಕ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಒಂಬತ್ತು ಜನ ಸಾವು ಕಂಡಿದ್ದಾರೆ.
ಕೆಲವು ದಿನದಿಂದ ಜ್ವರದಿಂದ ನರಳುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಈಗ ಸಿದ್ದಾಪುರ ತಾಲೂಕಿನಲ್ಲಿ 90 ಮಂಗನಕಾಯಿಲೆ ಪ್ರಕರಣ ಪತ್ತೆಯಾದರೇ ಇತರೆ ತಾಲೂಕುಗಳು ಸೇರಿ ಒಟ್ಟು 99 ಪ್ರಕರಣಗಳು ಇಲ್ಲಿಯವರೆಗೆ ಪತ್ತೆಯಾಗಿವೆ.