ನೂರಾರು ಹೆಣ್ಣು ಮಕ್ಕಳ ಮಾನ ಹಾನಿಗೆ ಕಾರಣವಾದ ಪೆನ್ ಡ್ರೈವ್ ಪ್ರಕರಣದಲ್ಲಿ ತಲೆ ಮರೆಸಿಕೊಂಡು, ಜರ್ಮನಿ ಸೇರಿದ್ದರು ಎನ್ನಲಾಗಿದ್ದ ಪ್ರಜ್ವಲ್ ರೇವಣ್ಣ, ಸದ್ಯ ದುಬೈ ತಲುಪಿಕೊಂಡಿರುವ ಸುದ್ದಿಯಾಗಿತ್ತು. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ” ದುಬೈ ಅಲ್ಲ;;ಯಾವುದೇ ದೇಶದಲ್ಲಿ ಹೋಗಿ ಅಡಗಿಕೊಳ್ಳಲಿ; ಅಲ್ಲೇ ಹೋಗಿ ಹೊತ್ತು ತರುತ್ತೇವೆ.” ಎಂದು ಖಡಕ್ ವಾರ್ನಿಂಗ್ ಕೊಟ್ಟರು.
“ಇದೇ ಕಾರಣಕ್ಕೆ, ನಾನು ಪ್ರಧಾನಿ ಮೋದಿಗೆ ಪತ್ರ ಬರೆದು, ‘ಡಿಪ್ಲೋಮೆಟಿಕ್ ಪಾಸ್ ಪೋರ್ಟ್’ ರದ್ದು ಪಡಿಸಿ ಎಂದಿದ್ದು. ಪಾಸ್ ಪೋರ್ಟ್ ರದ್ದಾದರೇ, ವಿದೇಶದಲ್ಲಿ ಅಡಗಿ ಕೂರಲು ಆಗುವುದಿಲ್ಲ.” ಎಂದರು. ಇನ್ನು ‘ಸಂತ್ರಸ್ತೆಯರನ್ನು ಅಪಹರಿಸಿ ಇಡಲಾಗಿದೆ’ ಎಂಬುದರ ಬಗ್ಗೆ ಪ್ರತಿಕ್ರೀಯಿಸಿದ ಮುಖ್ಯಮಂತ್ರಿಗಳು, ‘ಸಂತ್ರಸ್ತೆಯರು ಎಲ್ಲಿ ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದರು.