ದಿನೇ-ದಿನೇ ಹೆಚ್ಚುತ್ತಿರುವ ಪೆನ್ ಡ್ರೈವ್ ಪ್ರಕರಣದ ಕಿಚ್ಚಿಗೆ, ಈಗ ಮತ್ತೊಂದು ಆರೋಪ ಸೇರಿಕೊಂಡಿದೆ. ಮೈಸೂರಿನ ಕೆ.ಆರ್. ನಗರದ ವ್ಯಕ್ತಿಯೊಬ್ಬ ಈ ಆರೋಪ ಮಾಡಿದ್ದು, “ತನ್ನ ತಾಯಿ ಮೇಲೆ ರೇವಣ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ”ಎಂದು ಅಲವತ್ತುಕೊಂಡಿದ್ದಾನೆ. ಪೆನ್ ಡ್ರೈವ್ ಪ್ರಕರಣದಲ್ಲಿ ಹರಿದಾಡಿದ ವಿಡಿಯೋಗಳಲ್ಲಿ ನನ್ನ ತಾಯಿ ಪೋಟೋ ಕೂಡ ಇದೆ. ಆ ವಿಡಿಯೋ ಹರಿದಾಡಿದ ದಿನದಿಂದ ತಾಯಿ ಕಾಣೆಯಾಗಿದ್ದಾರೆ” ಎಂದು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಲಿಸಿದ್ದಾನೆ ಎನ್ನಲಾಗಿದೆ.
ಆ ವ್ಯೆಕ್ತಿ ತಿಳಿಸಿರುವಂತೆ, ಆತನ ತಾಯಿ ರೇವಣ್ಣನ ಮನೆಯಲ್ಲಿ ಕೆಲಸಮಾಡಿಕೊಂಡಿದ್ದರಂತೆ. ಸದ್ಯ ಈ ಘಟನೆ ನಡೆದಾಗಿನಿಂದ ಆಕೆ ಎಲ್ಲಿ ಹೋಗಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಸಂಚಲನ ಸೃಷ್ಪಿಸಿರುವ ಪೆನ್ ಡ್ರೈವ್ ಪ್ರಕರಣ ಗಂಭೀರವಾದ್ದರಿಂದ, ಈ ಬಗ್ಗೆ ಕೆ.ಆರ್ಪೊ. ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.