ಅಂತರಾಷ್ರ್ಟೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಖಾರವಾಗಿ ಪ್ರತಿಕ್ರೀಯಿಸಿದರು.
“ಹೇಳುವುದಕ್ಕೂ ಅಸಹ್ಯವಾಗುತ್ತಿದೆ. ಅಷ್ಟೊಂದು ವಿಡಿಯೋಗಳಲ್ಲಿ ಕಾಣಿಸಿಕೊಂಡ ಆ ‘ಪ್ರಜ್ವಲ್ ರೇವಣ್ಣ’ ‘ಉಮೇಶ್ ರೆಡ್ಡಿ’ಗಿಂತ ವಿಕೃತಕಾಮಿ ಎಂದು ಕಿಡಿಕಾರಿದರು. ರಾಜ್ಯದಲ್ಲಿ ನಡೆದ ಈ ಘಟನೆಯಿಂದ ರಾಜ್ಯ, ದೇಶ ಮಾತ್ರವಲ್ಲ; ಪ್ರಪಂಚವೇ ಈ ಬಗ್ಗೆ ಬೆಚ್ಚಿಬಿದ್ದಿದೆ. ಇದು ಮನುಷ್ಯರು ಮಾಡುವ ಕೃತ್ಯವಲ್ಲ. ಆತ ಬಂದರೆ ಪೆನ್ ಡ್ರೈವ್ ಹಾರ ಹಾಕಿ ಸ್ವಾಗತಿಸುತ್ತೇವೆ” ಎಂದು ಆಕ್ರೋಶ ಹೊರ ಹಾಕಿದರು.
ಇತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಪ್ರಜ್ವಲ್ ತನ್ನ ಲಾಯರ್ ಮೂಲಕ ಎಸ್ಐಟಿಗೆ ವಾರದ ಗಡುವು ಕೇಳಿ ಮನವಿಪತ್ರ ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರೀಯಿಸಿದ ಗೃಹ ಸಚಿವ ಪರಮೇಶ್ವರ್ “ವಿಚಾರಣೆಗೆ ಹಾಜರಾಗದೇ ಹೋದರೆ ಮುಲಾಜಿಲ್ಲದೆ ಬಂಧಿಸುತ್ತೇವೆ” ಎಂದಿದ್ದಾರೆ.
ಇನ್ನೊಂದೆಡೆ ಇದೇ ಪ್ರಜ್ವಲ್ ಪ್ರಕರಣದಲ್ಲಿ ಕುಮಾರಸ್ವಾಮಿಯೇ ಪೆನ್ ಡ್ರೈವ್ ಬಿಟ್ಟಿರಬಹುದು, ನಾವು ಬಿಡುವುದಿದ್ದರೆ; ಚುನಾವಣೆಗೆ ಹತ್ತು ದಿನ ಮೊದಲೇ ಬಿಡುತ್ತಿದ್ದೆವು. ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಹೆಸರು ಹೇಳದಿದ್ದರೇ; ತಿಂದ ಅನ್ನ ಕರಗುವುದಿಲ್ಲ” ಎಂದು ಸಂಸದ ಡಿಕೆ ಸುರೇಶ್ ವ್ಯೆಂಗ್ಯವಾಡಿದರು. ಈ ಮಾತಿಗೆ ಪ್ರತಿಕ್ರೀಯಿಸಿದ ಕುಮಾರಸ್ವಾಮಿ, “ಚಿಲ್ಲರೆ ಅಣ್ಣ-ತಮ್ಮಂದಿರು, 420 ಬ್ರದರ್ಸ್ ಅವರು. ಆ ಡ್ರೈವರ್ ಕಾರ್ತಿಕ್ ಗೌಡನನ್ನು ಮಲೇಶಿಯಾಗೆ ಕಳುಹಿಸಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಈ ಮಾನಹಾನಿ ಪ್ರಕರಣದಲ್ಲಿ ಪ್ರಬಲ ನಾಯಕರು ಪರಸ್ಪರ ಕೆಸರೆರೆಚಿಕೊಳ್ಳುತ್ತಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಮಹಾನ್ ನಾಯಕರ ಕೈವಾಡವಿರುವುದಂತೂ ಸತ್ಯ. ಪ್ರಜ್ವಲ್ ಮಾಡಿದ್ದು ಅತ್ಯಂತ ಹೀನ ಮತ್ತು ನೀಚ ಕೃತ್ಯ. ಆತನಿಗೆ ಅತ್ಯುಗ್ರ ಶಿಕ್ಷೆ ಆಗಲೇಬೇಕು. ಹಾಗೆಯೇ ಆ ಪೆನ್ ಡ್ರೈವ್ ಬಿಡುಗಡೆ ಮಾಡಿ ಸಂತ್ರಸ್ತ ಹೆಣ್ಣು ಮಕ್ಕಳ ಮಾನ,ಪ್ರಾಣಕ್ಕೆ ಕುತ್ತು ತಂದಿದ್ದು ಕೂಡ ಅಕ್ಷಮ್ಯ ಅಪರಾಧ. ಅವರುಗಳಿಗೂ ಶಿಕ್ಷೆಯಾಗಲಿ.