ಪೆನ್ ಡ್ರೈವ್ ಪ್ರಕರಣದಲ್ಲಿ ಜರ್ಮನ್ ದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಟ್ರಾವೆಲ್ ಹಿಸ್ಟರಿ ಅಸ್ಟು ಸುಲಭಕ್ಕೆ ಸಿಗುವಂಥದ್ದಲ್ಲ; ಕಾರಣ, ಆತ ಟ್ರಾವೆಲ್ ಮಾಡಿದ್ದು “ಡಿಪ್ಲೋಮೆಟಿಕ್ ಪಾಸ್ ಪೋರ್ಟ್/ ರಾಜತಾಂತ್ರಿಕ ಪಾಸ್ ಪೋರ್ಟ್ (Type-D)” ಮೂಲಕ. ಇದೊಂದು ವಿಶೇಷವಾದ ಪಾಸ್ ಪೋರ್ಟ್. ಭಾರತದ ರಾಜತಾಂತ್ರಿಕ ವರ್ಗದವರಿಗೆ, ಸರ್ಕಾರಿ ಕೆಲಸದ ನಿಮಿತ್ತ ಹೊರದೇಶಕ್ಕೆ ಹೋಗುವ ಅಧಿಕಾರಿಗಳಿಗೆ, ಹಾಗೂ ಸರ್ಕಾರದ ಪರ ಪ್ರತಿನಿಧಿಸುವ ವ್ಯೆಕ್ತಿಗಳಿಗೆ ಈ ಕಡುಗೆಂಪು ಬಣ್ಣದ ರಾಜತಾಂತ್ರಿಕ ಪೋರ್ಟ್ ನೀಡುತ್ತಾರೆ. ಗಮನಿಸಬೇಕಾದ ಸಂಗತಿ ಎಂದರೆ, ಸಾಮಾನ್ಯ ಪಾಸ್ ಪೋರ್ಟ್ ‘ಕಡು ನೀಲಿ’ ಬಣ್ಣದಲ್ಲಿರುತ್ತದೆ.
28 ಪುಟ ಹೊಂದಿರುವ ಈ ವಿಶೇಷ ಡಿಪ್ಲೋಮೆಟಿಕ್ ಪಾಸ್ ಪೋರ್ಟನ್ನು ದಿಲ್ಲಿಯ ವಿದೇಶಾಂಗ ಸಚಿವಾಲಯದ, ಪಾಸ್ ಪೋರ್ಟ್ ಪ್ರೋಗ್ರಾಮ್ ವಿಭಾಗದಲ್ಲಿ ಮಾತ್ರ ನೀಡಲಾಗುತ್ತದೆ. ಸಾಮಾನ್ಯ ಪಾಸ್ ಪೋರ್ಟ್ ವಯಸ್ಕರಿಗೆ 10 ವರ್ಷ ಮತ್ತು ಮಕ್ಕಳಿಗೆ ಐದು ವರ್ಷದ ವ್ಯಾಲಿಡಿಟಿಯೊಂದಿಗೆ ನೀಡಲಾಗುತ್ತದೆ. ಆದರೆ ಈ ಡಿಪ್ಲೋಮೆಟಿಕ್ ಪಾಸ್ ಪೋರ್ಟನ್ನು ಐದು ಅಥವ ಐದಕ್ಕಿಂತ ಕಡಿಮೆ ಅವಧಿಯ ವ್ಯಾಲಿಡಿಟಿಯೊಂದಿಗೆ ವಿತರಿಸಲಾಗುತ್ತದೆ.
ಇದರ ವಿಶೇಷವೆಂದರೆ, ಈ ಪಾಸ್ ಪೋರ್ಟ್ ಹೊಂದಿದವರು ವಿದೇಶ ಪ್ರಯಾಣ ಹೋದಾಗ ಆಯಾ ದೇಶದಲ್ಲಿ ಇವರಿಗೆ ಅಲ್ಲಿನ ರಾಜರಾಂತ್ರಿಕ ವ್ಯೆವಸ್ಥೆ ಬಹುಬೇಗ ಸಹಾಯಕ್ಕೆ ಬರುತ್ತದೆ. ಈ ಪಾಸ್ ಪೋರ್ಟ್ ಅನ್ನು ವ್ಯೆಕ್ತಿಯ ಅಧಿಕೃತ ಗುರುತಿನ ದೃಢೀಕರಣವಾಗಿ ಗುರುತಿಸಲಾಗುತ್ತದೆ. ಜೊತೆಗೆ ಅಲ್ಲಿನ ಆಧೀಕೃತ ಸ್ಥಾನಮಾನವು ಸಿಗುತ್ತದೆ. ಒಟ್ಟಿನಲ್ಲಿ ಈ ಡಿಪ್ಲೋಮೆಟಿಕ್ ಪಾಸ್ ಪೋರ್ಟ್ ಹೊಂದಿದವರಿಗೆ, ಅಂತರಾಷ್ಟ್ರೀಯ ಕಾನೂನಿನಡಿ ವಿಶೇಷ ಮಾನ್ಯತೆಯ ಜೊತೆಗೆ ವಿಶೇಷವಾದ ಸೌಲಭ್ಯ ದೊರೆಯುತ್ತದೆ. ಇನ್ನೂ ವಿಶೇಷವಾಗಿ, ಅತಿಥೇಯ ರಾಷ್ಟ್ರದಲ್ಲಿ ಈ ಡಿಪ್ಲೋಮೆಟಿಕ್ ಪಾಸ್ ಪೋರ್ಟ್ ಹೊಂದಿರುವ ವ್ಯೆಕ್ತಿಯನ್ನು ಅರೆಸ್ಟ್ ಮಾಡುವುದಾಗಲಿ, ಏಕಾ-ಏಕಾ-ಏಕಿ ವಶಕ್ಕೆ ಪಡೆಯುವುದಾಗಲಿ ಮಾಡುವಂತಿಲ್ಲ.
ಹಾಗೆಯೇ ಈ ಪಾಸ್ ಪೋರ್ಟ್ ಹೊಂದಿರುವವರ “ಟ್ರಾವೆಲ್ ಹಿಸ್ಟರಿ” ಕೂಡ ಸುಲಭಕ್ಕೆ ಸಿಗುವುದಿಲ್ಲ.
ಇದೇ ಉದ್ದೇಶದಲ್ಲೇ ಪ್ರಜ್ವಲ್ ರೇವಣ್ಣ ಈ ಡಿಪ್ಲೋಮೆಟಿಕ್ ಪಾಸ್ ಪೋರ್ಟಿನ ಮೂಲಕ ಪ್ರಯಾಣ ಬೆಳೆಸಿ, “ಜರ್ಮನಿನ ಫ್ರಾಂಕ್ ಫರ್ಟ”ಲ್ಲಿ ತಲೆ ಮರೆಸಿಕೊಂಡಿರೋದು. ಸದ್ಯ ರಾಜ್ಯ ಛೀ-ಥೂ ಎನ್ನುವ ಹಂತ ತಲುಪಿದ್ದರಿಂದ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ಪತ್ರ ಬರೆದು ಈತನ ಡಿಪ್ಲೋಮೆಟಿಕ್ ಪಾಸ್ ಪೋರ್ಟ್ ರದ್ದು ಪಡಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮೂಲಗಳ ಪ್ರಕಾರ ಕೇಂದ್ರ ಸರ್ಕಾರವು, ಸದ್ಯದಲ್ಲೇ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡುತ್ತದೆ ಎನ್ನಲಾಗಿದೆ.
ಏನೇ ಆದರೂ ಕಾನೂನಿಗೆ ತಲೆ ಬಾಗಲೇ ಬೇಕು. ಮಹಿಳೆಯರ ಗೌರವಕ್ಕೆ ಧಕ್ಕೆ ತಂದು, ಇಡೀ ರಾಜ್ಯಕ್ಕೆ ಮುಜುಗರ ತಂದ ವ್ಯೆಕ್ತಿಗೆ ಶಿಕ್ಷೆಯಂತೂ ಆಗಲೇಬೇಕಿದೆ. “ಬಿಜಯ್ ಕುಮಾರ್ ಸಿಂಗ್” ನೇತೃತ್ವದ “ಎಸ್ಐಟಿ” ಸಖತ್ ಸ್ಟ್ರಾಂಗ್ ಇರೋದ್ರಿಂದ, ಈ ಕೇಸು ಶೀಘ್ರಗತಿಯಲ್ಲಿ ಇತ್ಯರ್ಥವಾಗಲಿದೆ.