ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ‘ಅಮಿತ್ ಶಾ’ ಪ್ರಚಾರಕ್ಕೆ ಬಂದ ಹಿನ್ನೆಲೆಯಲ್ಲಿ ನಡೆದ ಸಮಾವೇಷ ಉದ್ದೇಶಿಸಿ ಮಾತಾಡಿದ ಸಂಸದ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಅನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕಳಸಾ ಬಂಡೂರಿ ಮತ್ತು ಮಹದಾಯಿ ವಿಚಾರದಲ್ಲಿ ಮನಮೋಹನ್ ಸಿಂಗ್ ಸರ್ಕಾರದವಿದ್ದಾಗ ಸೋನಿಯಾ ಗಾಂಧಿಯವರಿಂದ ರಾಜ್ಯಕ್ಕೆ ಮಹಾ ಮೋಸವಾಗಿದೆ. ಮಹಾದಾಯಿ ವಿಚಾರದಲ್ಟ್ರಿ ಟ್ರಿಬ್ಯುನಲ್ ಕೇಸು ಮಾಡಿದವರು ಇವರು. ಮುಂದೆ ನ್ಯಾಯಾದೀಶರನ್ನು ನೇಮಿಸುವುದು ತಡಮಾಡಿದರು. ನೇಮಿಸಿದ ನಂತರವೂ ಸರಿಯಾದ ಸ್ಥಳಾವಕಾಶ ಮಾಡಿಕೊಡದೆ, ಸರಿಯಾಗಿ ಸದಸ್ಯರನ್ನು ನೇಮಕ ಮಾಡದೇ, ಮೀನಾ ಮೇಷ ಎಣಿಸಿತ್ತು ಆ ಕಾಂಗ್ರೇಸ್. ಹಾಗೆಯೇ, ಗೆಜೆಜ್ ನೋಟೀಫಿಕೇಷನ್ ಮಾಡಿಸದೇ, ತಳ್ಳುತ್ತಲೇ ಬಂದು ರಾಜ್ಯಕ್ಕೆ ಅನ್ಯಾಯ ಮಾಡಿದರು. ನಂತರದಲ್ಲಿ ಆ ಗೆಜೆಟ್ ನೊಟಿಫಿಕೇಷನ್ ರೆಡಿ ಮಾಡಿಕೊಟ್ಟಿದ್ದು ನಮ್ಮ ಮೋದಿ ಸರ್ಕಾರ” ಎಂದರು
“ಪರಿಸರ ಇಲಾಖೆಯ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರೆ; ಆದರೆ ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಕ್ಕಿದೆ. ರಾಜ್ಯ ಸರ್ಕಾರ ಕಳುಹಿಸಿದ ವಿಸ್ತ್ರತ ವರಧಿಯನ್ನು ಒಪ್ಪಿಕೊಂಡಿದ್ದು ನಮ್ಮದೇ ಭಾರತೀಯ ಜನತಾ ಪಾರ್ಟಿ ಸರ್ಕಾರ” ಎಂದರು. ಮಹದಾಯಿ ಸಂಬಂಧಿಸಿ ಐವತ್ತೈದು ಎಕರೆ ದಟ್ಟ ಅರಣ್ಯ ಕಡಿಯಬೇಕಿತ್ತು. ಅಲ್ಲಿ ಹುಲಿಗಳು ಇರುವುದರಿಂದ ಅರಣ್ಯ ಇಲಾಖೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ; ಅದನ್ನು ಕೂಡ ಸರಿ ಮಾಡಲಿದ್ದೇವೆ. “ಮಹದಾಯಿಂದ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಬಿಟ್ಟು ಕೊಡುವುದಿಲ್ಲ” ಎಂದಿದ್ದ ಸೋನಿಯಾ ಕಡೆಯವರು ನೀವು, ನಮಗೆ ಪಾಠ ಹೇಳಲು ಬರಬೇಡಿ” ಎಂದರು. ಮಹದಾಯಿಯಲ್ಲಿ ನಾವು ಕಟ್ಟಿದ ಕಾಲುವೆಗೆ ತಡೆ ಗಟ್ಟಿದ ಪಾಪಿಗಳು; ನೀವು ಕಾಂಗ್ರೇಸ್ಸಿಗರು. ನಾವು ನಮ್ಮ ಬದ್ಧತೆಯಿಂದ ಮಹದಾಯಿ ಯೋಜನೆ ಮುಗಿಸುತ್ತೇವೆ” ಎಂದು ಭರವಸೆಯ ಮಾತಾಡಿದರು. “ಹುಬ್ಬಳ್ಳಿ-ಧಾರವಾಡ ಬೆಂಗಳೂರು ನಗರದ ನಂತರದ ಸ್ಥಾನ ಏನು ಸಿಕ್ಕಿದೆ ಅದೇ ಮಟ್ಟದಲ್ಲಿ ಅಭಿವೃದ್ದಿ ಕಾರ್ಯ ಮಾಡುತ್ತೇವೆ. ಹುಬ್ಬಳ್ಳಿ-ಧಾರವಾಡವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಮಾಡುತ್ತೇವೆ” ಎಂಬ ಸಂಕಲ್ಪದ ಮಾತಾಡಿದರು.