ಕಳೆದವಾರವಷ್ಟೇ “ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನ ಮಾಡಲಾಗಿದೆ” ಎಂದು ಕೇಸು ಹಾಕಿಸಿಕೊಂಡಿದ್ದ ಬಸವನಗೌಡ ಪಾಟೀಲ್ ಯತ್ನಾಳರ ಮೇಲೆ ಈಗ ಅದೇ ಥರದ ಮತ್ತೊಂದು ಕೇಸು ದಾಖಲಾಗಿದೆ. ಬಾಗಲಕೋಟೆಯ ನವನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಕಾರ್ಮಿಕ ನಿರೀಕ್ಷಕ ‘ರಮೇಶ್ ಭೀಮಪ್ಪ ಸಿಂದಗಿ’ ಎಂಬುವವರು “ಸಚಿವ ಶಿವಾನಂದ ಪಾಟೀಲರ ಬಗ್ಗೆ ಅವನಹೇಳನ ಮಾಡಲಾಗಿದೆ” ಎಂದು ಕೇಸು ಕೊಟ್ಟ ಅಡಿಯಲ್ಲಿ ಯತ್ನಾಳ್ ವಿರುದ್ಧ ಎಫ್ಐಆರ್ ಮಾಡಲಾಗಿದೆ.
“ಏಪ್ರೀಲ್ ಇಪ್ಪತ್ತೊಂಬತ್ತರಂದು ಬಾಗಲಕೋಟೆಯ ನವನಗರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕಾರ್ಯಕ್ರಮದ ಭಾಷಣದ ವೇಳೆ, ಶಾಸಕ ಯತ್ನಾಳ್ ಸಚಿವ ಶಿವಾನಂದ ಪಾಟೀಲ್ ಚಾರಿತ್ರ್ಯಕ್ಕೆ ಧಕ್ಕೆ ತರುವಂತೆ ಮಾತನಾಡಿದ್ದು, ಅವಹೇಳನ ಮಾಡಲಾಗಿದೆ” ಎಂದು ದೂರು ನೀಡಲಾಗಿದೆ. ಈ ಬಗ್ಗೆ ನವನಗರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಖಂಡಿಸಿ, ಎಪ್ರೀಲ್ ಇಪ್ಪತ್ತೆರಡರಂದು ಕಲ್ಬುರ್ಗಿ ಸರ್ಧಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರತಿಭಟನೆಯಲ್ಲಿ, ಇದೇ ಯತ್ನಾಳರು, ಸಿಎಂ ಸಿದ್ದರಾಮಯ್ಯನವರೂ ಸೇರಿದಂತೆ, ಕೆಲವರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಅನ್ವಯ, ಕಲ್ಬುರ್ಗಿ ನಗರ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು. ಇದೀಗ ವಾರದೊಳಗೆ ಮತ್ತೊಂದು ಕೇಸು ಜಡಿಯಲಾಗಿದೆ.
ಈ ಬಗ್ಗೆ ಪ್ರತಿಕ್ರೀಯಿಸಿದ ಯತ್ನಾಳ್ “ನನ್ನನ್ನು ಅರೆಸ್ಟ್ ಮಾಡಿಸುವ ಪ್ರಯತ್ನ ನಡೆಯುತ್ತಿದೆ, ಇದಕ್ಕೆಲ್ಲ ಜಗ್ಗುವುದಿಲ್ಲ. ಹೋರಾಟ ಮುಂದುವರೆಸುತ್ತೇನೆ” ಎಂದು, ಎಂದಿನ ಶೈಲಿಯಲ್ಲಿಯೇ ಚಾಟಿಬೀಸಿದರು.
ನನನ್ನು ಅರೆಸ್ಟ್ ಮಾಡಿಸುವ ಉದ್ದೇಶವಿದೆ: ಡಿಕೆ ಶಿವಕುಮಾರ್, ಖರ್ಗೆ ವಿರುದ್ಧ ಯತ್ನಾಳ್ ಆರೋಪ
ಏಪ್ರಿಲ್ 22ರಂದು ಹುಬ್ಬಳ್ಳಿಯ ನೇಹಾ ಹತ್ಯೆ ಖಂಡಿಸಿ ಕಲಬುರಗಿ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣ ಆರೋಪದ ಹಿನ್ನಲೆ ಶಾಸಕ ಯತ್ನಾಳ್ ಸೇರಿ ಹಲವರ ವಿರುದ್ಧ ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.