ದೇಶದಾದ್ಯಂತ ಲೋಕಸಭಾ ಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ವಿಶ್ವಾಸ ವ್ಯೆಕ್ತಪಡಿಸಿದರು.
ನಿನ್ನೆ ಉತ್ತರ ಪ್ರದೇಶದ ಬಹರಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರ್ಮಲ್ ಕುಮಾರ್ ಸಹಾ ಅವರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ಈಗಾಗಲೇ ನಡೆದುಹೋದ “191 ಕ್ಷೇತ್ರ”ಗಳ ಚುನಾವಣಾ ಮತಗಟ್ಟೆ ಸಮೀಕ್ಷೆ ನೋಡಿದರೆ, ನಿಸ್ಸಂಶಯವಾಗಿ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುವ ಸೂಚನೆ ಸಿಕ್ಕಿದೆ. ನಮ್ಮ ಉತ್ತರ ಪ್ರದೇಶದ ಎಲ್ಲಾ 80 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ, ಮೋದಿಗೆ ಉಡುಗೊರೆಯಾಗಿ ನೀಡಲಾಗುವುದು” ಎಂದರು.
ಇನ್ನು ಇದೇ ವೇಳೆ “ಸಂದೇಶ್ ಖಾಲಿ ಪ್ರಕರಣ” ಮತ್ತು “ರಾಮನವಮಿ ಗಲಭೆ”ಗಳ ಬಗ್ಗೆ ಪ್ರಸ್ತಾಪಿಸಿದ ಯೋಗಿ “ಇಂತಹ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದ್ದರೇ, ತಪ್ಪಿತಸ್ಥರ ಮುಂದಿನ ಏಳು ಪೀಳಿಗೆ ನೆನಪಿಡುವಂತೆ ಶಿಕ್ಷಿಸುತ್ತಿದ್ದೆ” ಎಂದು ಗುಡುಗಿದರು.