ಬೆಂಗಳೂರು ಗ್ರಾಮಾಂತರ: ಕುಟುಂಬಕ್ಕೆ ಬಂದ ಕೋಟ್ಯಾಂತರ ರೂ. ಹಣದಿಂದಾಗಿ ಪತಿಯೊಬ್ಬಾತ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ್ ಎಂಬಾತ ಪತ್ನಿ ಜಯಲಕ್ಷ್ಮಿ (36)ಯನ್ನು ಕೊಲೆ ಮಾಡಿದ್ದಾನೆ.
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಈ ಕುಟುಂಬಕ್ಕೆ ಸೇರಿದ್ದ ಭೂಮಿ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನವಾಗಿತ್ತು. ಹೀಗಾಗಿ ಕುಟುಂಬಕ್ಕೆ ಸುಮಾರು ಎರಡು ಕೋಟಿ ರೂ.ಗೂ ಅಧಿಕ ಹಣ ಬಂದಿತ್ತು. ಪತಿ ಕುಡಿತದ ದಾಸನಾಗಿದ್ದರಿಂದಾಗಿ ಪತ್ನಿ ಹಣವನ್ನು ತನ್ನ ತವರು ಮನೆಗೆ ಕಳುಹಿಸಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎತ್ತಿ ಹಿಡಿಯುವಂತೆ ಹೇಳಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಶ್ರೀನಿವಾಸ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಆಕೆಯ ತಲೆಗೆ ಹಿಂಬದಿಯಿಂದ ಬಲವಾಗಿ ಮಚ್ಚಿನಿಂದ ಹೊಡೆದು ನಂತರ ಸಂಪಿನಲ್ಲಿ ಹಾಕಿದ್ದಾನೆ.
ಮಕ್ಕಳು ಬಂದು ಕೇಳಿದಾಗ ಗೊತ್ತಿಲ್ಲ ಅಂತ ಹೇಳಿದ್ದಾನೆ. ಸಂಪಿನಲ್ಲಿ ನಾಯಿ ಬಿದ್ದಿದೆ. ಅದನ್ನು ತೆಗೆಯಬೇಡಿ ಅಂದಿದ್ದಾನೆ. ಮಕ್ಕಳು ಸಂಶಯದಿಂದ ತೆಗೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದಿದ್ದಾರೆ.