ಸದ್ಯ ರಾಜಕೀಯ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿರುವ, ಹೀನ ಕೃತ್ಯದ ಪ್ರಜ್ವಲ್ ರೇವಣ್ಣನವರದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಹರಿಹಾಯ್ದಿದ್ದಾರೆ.
“ವ್ಯೆಕ್ತಿಯ ತಪ್ಪಿಗೆ ಕುಟುಂಬ ಎಳೆದು ತರಬೇಡಿ, ಇದು ದೇವೇಗೌಡರಿಗಾಗಲಿ, ಕುಮಾರಸ್ವಾಮಿಗಾಗಲಿ ಸಂಬಂಧಿಸಿದ್ದಲ್ಲ. ಇದು ಅವರ ವೈಯಕ್ತಿಕ ವಿಷಯ” ಎಂದು ಸಮಜಾಯಿಷಿಕೊಟ್ಟರು. ಇದೇ ಸಂದರ್ಭದಲ್ಲಿ ಸ್ವಲ್ಪ ನೋವಲ್ಲಿದ್ದಂತೆ ಕಂಡ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಮಗ ರಾಕೇಶ್ ಸಾವಿನ ಬಗ್ಗೆ ಕೆಣಕಿದರು. “ನಿಮ್ಮ ಮಗ ರಾಕೇಶ್ ಹೇಗೆ ಸತ್ತ? ಮತ್ತು ಆಗ ನಿಮ್ಮ ಕುಟುಂಬದಲ್ಲಿ ಎನೇನು ನಡೆದಿತ್ತು?. ಮತ್ತು ಈ ಸಾವಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಿಮಗೆ ಸಹಾಯ ಮಾಡಿದ್ದನ್ನು ಮರೆತಿದ್ದೀರಿ” ಎಂದು ಕುಟುಕಿದರು. ರಾಕೇಶ್ ಸಾವಿನ ರಹಸ್ಯ ಬಯಲು ಮಾಡುತ್ತೇನೆ. ನಿಮ್ಮ ಕುಟುಂಬದಲ್ಲಿ ಎನೇನಾಯಿತು ಎಲ್ಲಾ ದಾಖಲೆಯನ್ನು ಹೊರ ತರುತ್ತೇನೆ” ಎಂದರು.