ಹುಬ್ಬಳ್ಳಿ ನಗರದಲ್ಲಿ ನಿನ್ನೆ ಸಂಜೆ (28) ಸದ್ಭಾವನ ತಂಡ ಆಯೋಜಿಸಿದ್ದ ಪ್ರತಿಭಟನಾ ಸಭೆ ಮತ್ತು ಪಂಜಿನ ಮೆರವಣಿಗೆ ನಡೆದಿದ್ದು, ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಜಿಹಾದಿ ಮನಸ್ಥಿತಿಗಳ ಮೇಲೆ ಕಿಡಿಕಾರಿದ್ದಾರೆ.
ನೇಹಾ ಹಿರೇಮಠ ಹತ್ಯೆ ಖಂಡಿಸಿ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಶುರುವಾದ ಮೌನ ಮೆರವಣಿಗೆಯು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೂ ಸಾಗಿ ಬಂದು, ಕೊನೆಯಲ್ಲಿ ಲವ್ ಜಿಹಾದಿಗೆ ಬಲಿಯಾದ ಯುವತಿಯರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ” ಹಿಂದೂ ಮಹಿಳೆಯರು ಈ ಜಿಹಾದಿ ಮನಸ್ಥಿತಿಗಳ ವಿರುದ್ಧ ಜಾಗೃತರಾಗಿ, ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಎಚ್ಚರಿಕೆಯ ಕರೆ ಕೊಟ್ಟರು.
ಇತ್ತೀಚಿನ ನೇಹಾ ಹಿರೇಮಠಳ ಹತ್ಯೆಯಿಂದ ಇಡೀ ದೇಶವೇ ಭಯಭೀತಗೊಂಡಿದೆ. ಇದೊಂದು ವ್ಯೆವಸ್ಥಿತವಾಗಿ ರೂಪಿಸಿ ನಡೆಸಿದ ಸಂಚು ಎಂದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ದಿನಬೆಳಗಾದರೇ ಈ ಲವ್ ಜಿಹಾದ್ ನಂತಹ ಸಾಕಷ್ಟು ಪ್ರಕರಣಗಳು ನಡೆಯುತ್ತಲೇ ಹೋಗುತ್ತಿವೆ. ” ಕಳೆದ ಮೂರ್ನಾಲ್ಕು ವರ್ಷದಲ್ಲಿ 21 ಸಾವಿರ ಯುವತಿಯರು ಕಾಣೆಯಾಗಿದ್ದಾರೆ” ಎಂದು ಖುದ್ದು ಗೃಹ ಸಚಿವರೇ ಹೇಳಿಕೆಕೊಟ್ಟಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕಿದೆ ಎಂದರು.
ಹಿಂದಿನಿಂದಲೂ ನಿರಂತರವಾಗಿ ಈ ಮುಸಲ್ಮಾನರ ಆಕ್ರಮಣ ನಮ್ಮ ದೇಶದ ಮೇಲೆ ನಡೆಯುತ್ತಲೇ ಬಂದಿದೆ. ಇವೆಲ್ಲದಕ್ಕೂ ಜಿಹಾದಿ ಮನಸ್ಥಿತಿಯೇ ಕಾರಣ. ಅಷ್ಟಾಗಿಯೂ ನಮ್ಮ ಪೂರ್ವಜರು ಹಿಂದೂ ಧರ್ಮವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಸ್ವಾತಂತ್ರ ಕೊಡಲು ಹಿಂದೇಟು ಹಾಕುತ್ತಿಲ್ಲ; ಬದಲಿಗೆ ಆ ಸ್ವಾತಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲು ಇಂತಹ ಜಿಹಾದಿ ಮನಸ್ಥಿತಿಗಳು ಹೊಂಚು ಹಾಕುತ್ತಾ ಕುಳಿತಿರುತ್ತವೆ. ಈ ಬಗ್ಗೆ ಹಿಂದೂಗಳು ಅರಿತಿರಬೇಕಾಗಿದೆ” ಎಂದು ಚಕ್ರವರ್ತಿ ಸೂಲಿಬೆಲೆ ಎಚ್ಚರಿಸಿದರು.