ಬೆಂಗಳೂರು: ರಾಜ್ಯದ ಹಲೆವೆಡೆ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರು ನಗರದಲ್ಲಿ ಎಂದಿನಂತೆ ಮತದಾನ ನಿರಸವಾಗಿದೆ.
ರಾಜ್ಯದಲ್ಲಿ (Karnataka) ಸಂಜೆ 5ರ ವೇಳೆಗೆ ಶೇ.63.90 ರಷ್ಟು ಮತದಾನವಾಗಿದೆ. ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ ಶೇ.50ರಷ್ಟು ದಾಟಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಶೇ.61.78, ಬೆಂಗಳೂರು ಉತ್ತರ ಶೇ.50.04, ಬೆಂಗಳೂರು ಕೇಂದ್ರ ಶೇ.48.61, ಬೆಂಗಳೂರು ದಕ್ಷಿಣ ಶೇ. 49.37ರಷ್ಟು ಮತದಾನವಾಗಿದೆ. ಉಡುಪಿ-ಚಿಕ್ಕಮಗಳೂರು ಶೇ.72.13, ದಕ್ಷಿಣ ಕನ್ನಡ ಶೇ.71.83, ಹಾಸನ ಶೇ.71.13, ಚಿತ್ರದುರ್ಗ ಶೇ.67, ತುಮಕೂರು ಶೇ.72.10, ಮಂಡ್ಯ ಶೇ.74.87, ಮೈಸೂರು ಶೇ.65.85, ಚಾಮರಾಜನಗರ ಶೇ.69.60, ಚಿತ್ರದುರ್ಗ ಶೇ.70.97, ಕೋಲಾರ ಶೇ.71.26 ರಷ್ಟು ಮತದಾನವಾಗಿದೆ. ಇನ್ನೂ ಸಮಯವಿದ್ದು, ಹೆಚ್ಚಿನ ಮತದಾನವಾಗುವ ಸಾಧ್ಯತೆ ದೆ.