ಬೆಂಗಳೂರು: ನಟಿ ಅಮೂಲ್ಯ ಅವರ ಮಾವನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಟಿ ಅಮೂಲ್ಯ ಮಾವ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಅವರ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಮೇಲೆಯೇ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾತ್ರಿ 10 ಗಂಟೆ ವೇಳೆಗೆ ಆಗಮಿಸಿದ್ದ ಚುನಾವಣಾಧಿಕಾರಿಗಳು ಸುಮಾರು 10 ವಾನಹಗಳಲ್ಲಿ ಆಗಮಿಸಿದ್ದರು. ದಾಳಿಯ ಸಂದರ್ಭದಲ್ಲಿ 31 ಲೀಟರ್ ನಷ್ಟು ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಚಂದ್ರ, ನಮ್ಮ ಮನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಧಿಕಾರಿಗೆ ಆಗಾಗ ಕರೆ ಬರುತ್ತಿತ್ತು.
ಕರೆಯಲ್ಲಿದ್ದ ವ್ಯಕ್ತಿ. ಅವರನ್ನು ಎರಡ್ಮೂರ ದಿನ ಒಳಗೆ ಹಾಕಿ ಅಂತ ಸಲಹೆ ನೀಡುತ್ತಿದ್ದ. ಈ ಭಾಗದಲ್ಲಿ ಕಾಂಗ್ರೆಸ್ ಹಣ ಹಂಚಲು ಮುಂದಾಗಿದೆ. ಇದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಎಂಬ ಕಾರಣಕ್ಕೆ ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬರುತ್ತವೆ. ಭಯ ಹುಟ್ಟಿಸುವುದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.