ಅಯೋಧ್ಯೆ: ರಾಮನವಮಿಯಂದು ಗರ್ಭ ಗುಡಿಯಲ್ಲಿರುವ ಬಾಲರಾಮನ ಹಣೆ ಮೇಲೆ ಸೂರ್ಯನು ತಿಲಕ ಇಡಲಿದ್ದಾನೆ.
ಹೌದು! ಇದಕ್ಕಾಗಿ ಆಪ್ಟಿಕಲ್ ಯಂತ್ರವನ್ನು ಬೆಂಗಳೂರು ಮೂಲದ ಕಂಪನಿಯೊಂದು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿದೆ.
ಒಟ್ಟು 84 ಲಕ್ಷ ರೂ. ಮೌಲ್ಯದ ಈ ಯಂತ್ರವನ್ನು ಜಿಗಣಿ ಲಿಂಕ್ ರಸ್ತೆಯಲ್ಲಿರುವ ಆಪ್ಟಿಕ್ಸ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಂಪನಿ ಉಡುಗೊರೆಯಾಗಿ ನೀಡುತ್ತಿದೆ. ನಾಲ್ಕು ತಿಂಗಳುಗಳ ಕಾಲ ಈ ಯಂತ್ರವನ್ನು ಸಿದ್ಧಪಡಿಸಲಾಗಿದೆ. ಪ್ರತಿ ರಾಮನವಮಿಯಂದು ಮೂರ್ನಾಲ್ಕು ನಿಮಿಷಗಳ ಕಾಲ ರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬೀಳಲು ಇದು ಸಹಕಾರಿಯಾಗಲಿದೆ.
ಈ ಯಂತ್ರವನ್ನು ಟೈಟಾನಿಯಂ, ಹಿತ್ತಾಳೆ ಹಾಗೂ ಕಂಚು ಬಳಸಿ ಸಿದ್ಧಪಡಿಸಲಾಗಿದೆ. ಇದು ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿನ ಕನ್ನಡಿಯು ರಾಮನವಮಿಯಂದು ನಿರ್ದಿಷ್ಟ ಕೋನದಲ್ಲಿ ಸೂರ್ಯನ ಬೆಳಕನ್ನು ಸೆರೆ ಹಿಡಿದು ವಿಗ್ರಹದ ಹಣೆ ಮೇಲೆ ನಿಖರವಾಗಿ ಮೂಡುವಂತೆ ಮಾಡುತ್ತದೆ.