ವಿಜಯಪುರ: ಸಿಡಿಲು ಬಡಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.
ಇಂಡಿ ಪಟ್ಟಣದ ಭೀರಪ್ಪ ಅವರಾದಿ (15) ಎಂಬ ಬಾಲಕ ಹಾಗೂ ತಾಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ಸೋಮಶೇಖರ್ ಪಟ್ಟಣಶೆಟ್ಟಿ (45) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಸಂತಸ ತಂದಿದ್ದ. ಆದರೆ, ಹಲವೆಡೆ ಗುಡುಗು, ಸಿಡಿಲು ಮಳೆಯಾಗಿದ್ದು, ಇಬ್ಬರು ಬಲಿಯಾಗುವಂತಾಗಿದೆ.
ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಲಬುರಗಿ ಜಿಲ್ಲೆಯಲ್ಲಿ ಕೂಡ ಮಳೆಯಾಗಿದೆ. ಹಲವೆಡೆ ಹಗುರ ಮಳೆಯಾಗಿದ್ದರೆ, ಇನ್ನೂ ಹಲವೆಡೆ ಭಾರೀ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಹಲವು ಹಳ್ಳಿ, ಪಟ್ಟಣಗಳಲ್ಲಿ ಭಾರೀ ಮಳೆಯಾಗಿದೆ. ಹಲವೆಡೆ ಜನ – ಜೀವನ ಅಸ್ತವ್ಯಸ್ಥವಾಗಿದೆ.