ಚಿಕ್ಕಮಗಳೂರು: ಗನ್ ಜೊತೆ ಆಟವಾಡುವಾಗಿ ಮಿಸ್ ಫೈರ್ ಆಗಿ 7 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಾಲಕರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಇದು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಏರ್ ಗನ್ ಜೊತೆ ಆಟವಾಡುವಾಗ ಬಾಲಕ ಟ್ರಿಗರ್ ಒತ್ತಿದ್ದಾನೆ. ಗನ್ ಮಿಸ್ ಫೈರ್ ಆಗಿ ಆತನ ದೇಹ ಹೊಕ್ಕಿದೆ. ಹೀಗಾಗಿ 7 ವರ್ಷದ ಬಾಲಕ ವಿಷ್ಣು ಸಾವನ್ನಪ್ಪಿದ್ದಾನೆ.
ಕಾಫಿ ತೋಟದಲ್ಲಿ ಮಂಗಗಳನ್ನು ಓಡಿಸಲು ಬಳಸುವ ಏರ್ ಗನ್ ಜೊತೆ ವಿಷ್ಣು ಮನೆ ಮುಂದೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಗನ್ನೊಳಗಿದ್ದ ಬಾಲ್ಸ್ ವಿಷ್ಣುವಿನ ಹೃದಯ ಭಾಗಕ್ಕೆ ಹೊಕ್ಕಿದೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.