ಡೆಹ್ರಾಡೂನ್: ನಮ್ಮ ಬಲಿಷ್ಠ ಸರ್ಕಾರದಡಿ ಉಗ್ರರು ಅವರ ನೆಲದಲ್ಲಿಯೇ ಹತ್ಯೆಯಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಋಷಿಕೇಶದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಅಸ್ಥಿರ ಹಾಗೂ ದುರ್ಬಲ ಸರ್ಕಾರಗಳು ಅಸ್ತಿತ್ವದಲ್ಲಿದ್ದಾಗ ಶತ್ರುಗಳು ಲಾಭ ಪಡೆದವು. ಭಯೋತ್ಪದಾನೆ ಹೆಚ್ಚಾಗಿ ಹರಡಿತ್ತು. ಬಲಿಷ್ಠ ಮೋದಿ ಸರ್ಕಾರದ ಮುಂದೆ ಇದು ಯಾವುದೂ ನಡೆಯಲ್ಲ. ನಮ್ಮ ಪಡೆಗಳು ಅವರ ನೆಲದಲ್ಲೇಯ ಹತ್ಯೆ ಮಾಡುತ್ತಿವೆ ಎಂದು ಹೇಳಿದ್ದಾರೆ.
ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಮೂಲಸೌಕರ್ಯ ಇರಲಿಲ್ಲ. ಈಗ ನಮ್ಮ ಸರ್ಕಾರ ಗಡಿಯಲ್ಲಿ ಸುರಂಗ ಹಾಗೂ ರಸ್ತೆಗಳನ್ನು ನಿರ್ಮಿಸುತ್ತಿದೆ. ಉತ್ತರಾಖಂಡದ ಪೂಜ್ಯ ದೇವತೆಗಳಾದ ಮಾ ಧಾರಿ ದೇವಿ ಮತ್ತು ಜ್ವಾಲಾ ದೇವಿಯಿಂದ ಸಂಕೇತಿಸಲ್ಪಟ್ಟ ʼಶಕ್ತಿʼ ಅನ್ನು ತೊಡೆದುಹಾಕುವ ಕುರಿತು ಮಾತನಾಡಿರುವ ಕಾಂಗ್ರೆಸ್ ಗೆ ಉತ್ತರಾಖಂಡದ ಜನ ತಕ್ಕ ಉತ್ತರ ನೀಡಬೇಕು ಎಂದು ಗುಡುಗಿದ್ದಾರೆ.