ರಾಜಕೀಯಕ್ಕೂ ಸಿನಿಮಾ ರಂಗಕ್ಕೂ ಹಿಂದಿನಿಂದಲೇ ನಂಟಿದೆ. ಎಷ್ಟೋ ಜನ ನಾಯಕರು ಸಿನಿಮಾ ರಂಗದಿಂದಲೇ ಬಂದು ರಾಜಕೀಯದಲ್ಲಿ ನೆಲೆ ನಿಂತು, ಅಧಿಕಾರ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ, ಭಾರತೀಯರು ಭಾವಾ ಜೀವಿ ಎಂಬುವುದಕ್ಕೆ ರಾಮಾಯಣ ಹಾಗೂ ಮಹಾಭಾರತ ಉದಾಹರಣೆಯಾಗಿ ನಿಂತಿವೆ.
ರಾಮಾಯಣ ಹಾಗೂ ಮಹಾಭಾರತ ಪಾತ್ರಗಳು ಭಾರತೀಯರ ಪಾಲಿಗೆ ಪೂರ್ವಜರೆಂಬ ಭಾವನೆಯ ಧ್ಯೂತಕ. ಹೀಗಾಗಿ ರಾಮಾಯಣ ಹಾಗೂ ಮಹಾಭಾರತ ದೇವರ ಅವತಾರ ಎಂಬುವುದು ಭಾರತೀಯರ ನಂಬಿಕೆ. ಹೀಗಾಗಿ ಹೆಚ್ಚು ಗೌರವ. ಈ ಕುರಿತು ಪ್ರಸಾರವಾಗಿದ್ದ ಧಾರಾವಾಹಿಗಳನ್ನು ಕೂಡ ಜನರು ಅಷ್ಟೇ ಭಕ್ತಿಯಿಂದ ವೀಕ್ಷಿಸಿ ಪಾವನರಾದಂತೆ ಸಂಭ್ರಮಿಸಿದ್ದರು. ಪಾತ್ರಗಳಲ್ಲಿ ಕಾಣಿಸಿಕೊಂಡವರನ್ನು ದೇವರಂತೆಯೇ ಕಂಡಿದ್ದ ನಮ್ಮ ಜನ ಇಂದಿಗೂ ಆ ಪಾತ್ರಧಾರಿಗಳಿಗೆ ಗೌರವ ನೀಡುತ್ತಿದ್ದಾರೆ. ಇದೇ ಗೌರವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರೆಗೂ ಕರೆದುಕೊಂಡು ಹೋಗಿದ್ದು, ಹಲವರು ಚುನಾವಣೆಯಲ್ಲಿ ಯಶಸ್ವಿಯಾಗಿ ಆ ಮೂಲಕ ಜನರ ಸೇವೆ ಮಾಡಿದ್ದಾರೆ. 80ರ ಆಸುಪಾಸಿನ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಹಾಗೂ ಮಹಾಭಾರತದ ಎರಡೂ ಧಾರಾವಾಹಿಗಳಲ್ಲಿನ ಪ್ರಮುಖ ಪಾತ್ರಧಾರಿಗಳಿಗೆ ಇನ್ನೂ ಬೇಡಿಕೆ ಹಾಗೂ ಗೌರವವಿದೆ. ಹಲವರು 2024ರ ಚುನಾವಣೆಯಲ್ಲಿ ಅದೇ ಇಮೇಜ್ ನಿಂದಲೇ ಸ್ಪರ್ಧಿಸುತ್ತಿದ್ದಾರೆ. ಎಲ್ಲರೂ ಯಶಸ್ವಿಯಾಗಿದ್ದಾರೆ ಎಂಬುವುದು ಇನ್ನೂ ವಿಶೇಷ.
ಈ ಬಾರಿಯ ಚುನಾವಣೆಯಲ್ಲಿ ನಿರ್ದೇಶಕ ರಮಾನಂದ್ ಸಾಗರ್ ನಿರ್ಮಾಣದ ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕೇವಲ ಅರುಣ್ ಗೋವಿಲ್ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಈ ಹಿಂದೆ ಕೂಡ ಎರಡೂ ಧಾರಾವಾಹಿಯ ಪಾತ್ರಧಾರಿಗಳು ಚುನಾವಣೆಗೆ ಸ್ಪರ್ಧಿಸಿ ಯಶಸ್ವಿಯಾಗಿದ್ದಾರೆ.
ರಾಮನಿಗಿಂತ ಮೊದಲೇ ಸೀತಾ ಪಾತ್ರಧಾರಿ, ದೀಪಿಕಾ ಚಿಕಾಲಿಯಾ 1991ರಲ್ಲೇ, ಚುನಾವಣೆಗೆ ಸ್ಪರ್ಧಿಸಿ, ಗೆಲುವನ್ನೂ ಸಾಧಿಸಿದ್ರು. ದೀಪಿಕಾ ಗುಜರಾತಿನ ವಡೋದರಾ ಕ್ಷೇತ್ರದಿಮದ ಬಿಜೆಪಿ ಅಭ್ಯರ್ಥಿಯಾಗಿ ಯಶಸ್ವಿಯಾಗಿದ್ರು. ರಾವಣನ ಪಾತ್ರ ನಿರ್ವಹಿಸಿದ್ದ ಅರವಿಂದ್ ತಿವಾರಿ ಕೂಡ ಗುಜರಾತ್ ನ ಸಬರ್ಕಾಂತ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹನುಮನ ಪಾತ್ರಧಾರಿ ದಾರಾ ಸಿಂಗ್ 1998ರಲ್ಲಿ ಬಿಜೆಪಿ ಸೇರಿದ್ದರು. 2003ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಮಹಾಭಾರತದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿದ್ದ ನಿತೀಶ್ ಭಾರದ್ವಾಜ್ 1996ರಲ್ಲಿ ಜಾರ್ಖಂಡ್ ನ ಜೆಮ್ಷೆಡ್ ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ದ್ರೌಪದಿ ಪಾತ್ರ ನಿರ್ವಹಿಸಿದ್ದ ರೂಪಾ ಗಂಗೂಲಿ ಕೂಡ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಒಂದು ಅವಧಿಗೆ ಅಧಿಕಾರ ಅನುಭವಿಸಿದ್ದಾರೆ. ಮಹಾಭಾರತದಲ್ಲಿ ಭರತನ ಪಾತ್ರ ನಿರ್ವಹಿಸಿದ್ದ ರಾಜ ಬಬ್ಬರ್ ಕಾಂಗ್ರೆಸ್ ನಿಂದ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಅಲ್ಲದೇ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಮಾಯಣದ ರಾಮ ಈಗ ಕಣದಲ್ಲಿದ್ದಾರೆ. ಅಯೋಧ್ಯೆಯ ರಾಮನನ್ನು ಕಣ್ತುಂಬಿಕೊಂಡಿರುವ ಜನರು ಪಾತ್ರಧಾರಿಗೆ ಜೈ ಎನ್ನುತ್ತಾರೆಯೇ ಕಾಯ್ದು ನೋಡಬೇಕಿದೆ.
ರಾಮಾಯಣ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲಿಯೇ ಎಲ್ಲರನ್ನೂ ಸಳೆದಿರುವ ಕಥಾ ಹಂದರ. ರಾಮನ ಶ್ರೇಷ್ಠತೆಯಿಂದಾಗಿ ಅದು ಜನಮಾನಸದಲ್ಲಿ ಮನೆ ಮಾಡಿದೆ. ಇನ್ನೂ ಮಹಾಭಾರತ ಕೃಷ್ಣನ ತಂತ್ರಗಾರಿಕೆ ಹಾಗೂ ದುಷ್ಠ ಶಿಕ್ಷಣ, ಶಿಷ್ಠ ರಕ್ಷಣೆಗೆ ಯಾವ ಯಾವ ತಂತ್ರಗಾರಿಕೆ ಮಾಡಬೇಕು ಎನ್ನುವದನ್ನು ಕೃಷ್ಣನ ಪಾತ್ರದ ಮೂಲಕ ಮಹಾಭಾರತ ಹೇಳುತ್ತದೆ. ಹೀಗಾಗಿ ಈ ಎರಡೂ ಕಥಾನಕಗಳು ಜನಮಾನಸದಲ್ಲಿ ಬಲವಾಗಿ ಬೇರೂರಿವೆ. ಹಾಗಾಗಿ ಇವುಗಳ ಧಾರಾವಾಹಿ ಕೂಡ ಭಾರತದಲ್ಲಿ ಭಾರೀ ಯಶಸ್ಸು ಕಂಡಿದ್ದವು. ಆ ಯಶಸ್ಸಿನ ಬೆನ್ನೇರಿದ ರಾಷ್ಟ್ರೀಯ ಪಕ್ಷಗಳು ಪಾತ್ರಧಾರಿಗಳನ್ನು ಬಳಸಿಕೊಂಡು ಜನರ ಮನ ಗೆಲ್ಲಲು ಯತ್ನಿಸಿದ್ದವು. ಈ ಬಾರಿಯೂ ಈ ಧಾರಾವಾಹಿಯ ಪಾತ್ರಧಾರಿಯೊಬ್ಬರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.