ಛತ್ತೀಸ್‌ಗಢ: ಹೆದರಿಸಿ ಬಂದ್ ಮಾಡಿದ್ದ ರಾಮ ಮಂದಿರವನ್ನು ಮತ್ತೆ ರೀ ಓಪನ್ ಮಾಡಲಾಗಿದೆ.
21 ವರ್ಷಗಳಿಂದ ಮುಚ್ಚಿದ್ದ ಛತ್ತೀಸ್‌ಗಢದ ಸುಖ್ಮಾ ಜಿಲ್ಲೆಯ ರಾಮ ಮಂದಿರವನ್ನೇ ಈಗ ಮತ್ತೆ ತೆರೆಯಲಾಗಿದೆ. ಹೀಗಾಗಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. 1970 ರಲ್ಲಿ ಬಿಹಾರಿ ಮಹಾರಾಜರು ಸುಕ್ಮಾ ಜಿಲ್ಲೆಯ ಲಖಪಾಲ್ ಮತ್ತು ಕೇರಳಪೆಂಡಾ ಗ್ರಾಮಗಳ ಹತ್ತಿರ ರಾಮ ಮಂದಿರ ನಿರ್ಮಿಸಿದ್ದರು. ಆದರೆ, 2003ರಲ್ಲಿ ಮಾವೋವಾದಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ದೇವಸ್ಥಾನವನ್ನು ಕೂಡ ಮುಚ್ಚಿದ್ದರು.
ಆದರೆ ಕಳೆದ ವರ್ಷ ಮಾರ್ಚ್‌ನಲ್ಲಿ ಕೇರಳಪೆಂಡಾ ಹತ್ತಿರ ಸಿಆರ್‌ಪಿಎಫ್ 74 ನೇ ಬೆಟಾಲಿಯನ್‌ಗಾಗಿ ಲಖಾಪಾಲ್ ಶಿಬಿರ ಸ್ಥಾಪಿಸಿದ್ದರು. ಈ ವಿಷಯವನ್ನು ಗ್ರಾಮಸ್ಥರು ಸಿಆರ್ ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಯೋಧರು ಸ್ಥಳಕ್ಕೆ ಭೇಟಿ ನೀಡಿ, ದೇವಾಲಯ ತೆರೆದು ಪೂಜೆ ಸಲ್ಲಿಸಿದ್ದಾರೆ.
ಸಿಆರ್‌ಪಿಎಫ್ ಯೋಧರು ರಾಮ ಮಂದಿರಕ್ಕೆ ಹಾಕಿದ್ದ ಬೀಗ ತೆರೆದು ದೇವಸ್ಥಾನದ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಿ, ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ. ಈಗ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.