ಬೆಂಗಳೂರು: ತಾಯಿಯೊಬ್ಬಳು ಮಕ್ಕಳನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ನಗರದಲ್ಲಿನ ಜಾಲಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಲಕ್ಷ್ಮಿ (7) ಮತ್ತು ಗೌತಮ್ (9) ಮೃತ ದುರ್ದೈವ ಮಕ್ಕಳು. ತಾಯಿ ಗಂಗಾದೇವಿ ಕೊಲೆ ಮಾಡಿರುವ ಪಾಪಿ ತಾಯಿ. ರಾತ್ರಿ ಸಂದರ್ಭದಲ್ಲಿ ಮಕ್ಕಳನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಗಂಗಾದೇವಿ ಕಳೆದ ಮಾರ್ಚ್ ನಲ್ಲಿ ತನ್ನ ಗಂಡನ ಮೇಲೆಯೇ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಳು. ಮಗಳ ಮೇಲೆ ಪತಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆಂದು ದೂರು ಸಲ್ಲಿಸಿದ್ದಳು. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಜಾಲಹಳ್ಳಿ ಪೊಲೀಸರು ಆರೋಪಿ ಪತಿಯನ್ನು ಜೈಲಿಗೆ ಅಟ್ಟಿದ್ದರು. ಇದಾದ ನಂತರ ಈಗ ಮಕ್ಕಳನ್ನು ಕೊಲೆ ಮಾಡಿದ್ದಾಳೆ. ಕೆಲಸ ಇಲ್ಲದ ಹಿನ್ನೆಲೆಯಲ್ಲಿ ಮಕ್ಕಳನ್ನು ಸಾಕುವುದು ಕಷ್ಟವಾಗಿದ್ದಕ್ಕೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.