ಐಪಿಎಲ್ ನ 23ನೇ ಪಂದ್ಯದಲ್ಲಿ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೈದರಾಬಾದ್ ತಂಡ ಗೆದ್ದು ಬೀಗಿದೆ.
ಚಂಡೀಗಢದ ಮಹಾರಾಜ ಯದವೀಂದ್ರ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಕೊನೆಯ ಸಂದರ್ಭದಲ್ಲಿ ರಣ ರೋಚಕತೆಗೆ ಸಾಕ್ಷಿಯಾಗಿತ್ತು. ಆದರೆ, ಅದೃಷ್ಟ ಹೈದರಾಬಾದ್ ಕೆಡೆಗೆ ವಾಲಿತು. ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಹೈದರಾಬಾದ್ ಬ್ಯಾಟಿಂಗ್ ಗೆ ಇಳಿಯುತು. ಆದರೆ, ಹೈದರಾಬಾದ್ ಪ್ರಮುಖ ಆಟಗಾರರು ಇಂದು ಮಿಂಚಲು ವಿಫಲರಾದರು. ಆರಂಭಿಕರಾದ ಟ್ರಾವಿಸ್ ಹೆಡ್ (21) ಹಾಗೂ ಅಭಿಷೇಕ್ ಶರ್ಮಾ (16) ಗಳಿಸಿ ಔಟ್ ಆದರು. ಐಡೆನ್ ಮಾರ್ಕ್ರಾಮ್ (0) ಶೂನ್ಯಕ್ಕೆ ಔಟ್ ಆದರು. ಕಣಕ್ಕಿಳಿದ ನಿತೀಶ್ ರೆಡ್ಡಿ 37 ಎಸೆತಗಳಲ್ಲಿ 64 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಾದರು. ಪರಿಣಾಮವಾಗಿ ಹೈದರಾಬಾದ್ ತಂಡ 9 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್ ಗೆ ಕೂಡ ಆರಂಭಿಕ ಆಟಗಾರರು ಕೈ ಕೊಟ್ಟರು. ಜಾನಿ ಬೈರ್ಸ್ಟೋವ್ (0) ಶೂನ್ಯಕ್ಕೆ ಔಟಾದರೆ, ಪ್ರಭ್ಸಿಮ್ರಾನ್ ಸಿಂಗ್ (4), ನಾಯಕ ಶಿಖರ್ ಧವನ್ 14 ರನ್ ಗಳಿಸಿ ಔಟ್ ಆದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಪ್ರತಿರೋಧ ಆರಂಭವಾಯಿತು. ಸ್ಯಾಮ್ ಕರನ್ (29), ಸಿಕಂದರ್ ರಾಝ (28) ಗಳಿಸಿದರು. ಇನ್ನೇನು ಪಂದ್ಯ ಸಂಪೂರ್ಣವಾಗಿ ಹೈದರಾಬಾದ್ ಕಡೆಗೆ ವಾಲಿತು ಅನ್ನುವಷ್ಟರಲ್ಲಿ ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ ತಂಡಕ್ಕೆ ಜಯದ ಆಸೆ ಮೂಡಿಸಿದರು. ಕೊನೆಯ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 29 ರನ್ ಗಳ ಅವಸ್ಯಕತೆ ಇತ್ತು. ಮೊದಲ ಎಸೆತದಲ್ಲೇ ಅಶುತೋಷ್ ಸಿಕ್ಸ್ ಗಳಿಸಿದರು. 2ನೇ ಬೌಲ್ ವೈಡ್ ಬಂತು. 2ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು.
3ನೇ ಮತ್ತು 4ನೇ ಎಸೆತಗಳಲ್ಲಿ ಎರಡೆರಡು ರನ್ ಓಡಿದರು. ನಂತರ ಮತ್ತೊಂದು ವೈಡ್ ಬಂತು. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ 9 ರನ್ ಬೇಕಿದ್ದಾಗ ಶಶಾಂಕ್ ಸಿಂಗ್ ಸಿಕ್ಸ್ ಸಿಡಿಸಿದರು. ಈ ಸಿಕ್ಸ್ನ ಹೊರತಾಗಿಯೂ ಸನ್ರೈಸರ್ಸ್ ಹೈದರಾಬಾದ್ ತಂಡವು 2 ರನ್ ಗಳ ಸೋಲು ಕಂಡಿತು. ಶಶಾಂಕ್ ಸಿಂಗ್ 25 ಎಸೆತಗಳಲ್ಲಿ 46 ರನ್, ಅಶುತೋಷ್ ಶರ್ಮಾ 15 ಎಸೆತಗಳಲ್ಲಿ 33 ರನ್ ಗಳಿಸಿದರು.