ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಸಂದರ್ಭದಲ್ಲಿ ಧೋನಿ ಅಭಿಮಾನಿಗಳಿಗೆ ಜಡೇಜಾ ಶಾಕ್ ನೀಡಿದ್ದಾರೆ.
ಚೆನ್ನೈ ತಂಡಕ್ಕೆ ಗೆಲುವಿನ ದಡಕ್ಕೆ ಬಂದಾಗ ಶಿವಮ್ ಧುಬೆ ಔಟ್ ಆಗಿದ್ದರು. ಈ ವೇಳೆ ಧೋನಿ ಆಡಲು ಬರಲು ಮುಂದಾಗಿದ್ದರು. ಹೀಗಾಗಿ ಅಭಿಮಾನಿಗಳು ಕಾತುರದಿಂದ ಖುಷಿಯಾಗಿ ಕಾಯುತ್ತಿದ್ದರು. ಈ ವೇಳೆ ಜಡೇಜಾ ಕ್ರೀಡಾಂಗಣಕ್ಕೆ ಬಂದವರಂತೆ ನಾಟಕವಾಡಿ ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣತಲ್ಲಿ ಭಾರೀ ವೈರಲ್ ಆಗಿದೆ. ಅಭಿಮಾನಿಗಳು ಧೋನಿ..ಧೋನಿ ಅನ್ನುತ್ತಿದ್ದರು. ಈ ವೇಳೆ ಬ್ಯಾಟ್ ಹಿಡಿದು ಜಡೇಜಾ ಬಂದರು. ಆ ವೇಳೆ ಎಲ್ಲರಿಗೂ ಶಾಕ್..ಆಗ ಮರಳಿ ಜಡೇಜಾ ಹೋಗ್ತಾರೆ…ಧೋನಿ ಎಂಟ್ರಿ ಕೊಡ್ತಾರೆ..ಇದನ್ನು ಕಂಡು ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಗೆ ಸಿಎಸ್ ಕೆ ಮುಂದಾಗಿತ್ತು. ಚೆನ್ನೈ ಬೌಲಿಂಗ್ ದಾಳಿಗೆ ನಲುಗಿದ ಕೆಕೆಆರ್ 137 ರನ್ ಮಾತ್ರ ಗಳಿಸಿತು. ಈ ಸುಲಭ ಗುರಿ ಬೆನ್ನಟ್ಟಿದ್ದ ಚೆನ್ನೈ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದೆ. ಧೋನಿ ವಿನ್ನಿಂಗ್ ರನ್ ಬಾರಿಸುತ್ತಿದ್ದಂತೆ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಈ ಗೆಲುವಿನ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿ, ಎರಡರಲ್ಲಿ ಸೋತಿದೆ.