ದಾವಣಗೆರೆ: ಅತ್ತೆ-ಮಾವನ ಮೇಲಿನ ಕೋಪಕ್ಕೆ ಸೊಸೆಯೊಬ್ಬಳು 40ಕ್ಕೂ ಅಧಿಕ ಅಡಿಕೆ ಮರಗಳನ್ನು ಕತ್ತರಿಸಿರುವ ಘಟನೆ ನಡೆದಿದೆ.
ಈ ಘಟನೆ ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ. ಚಿದಾನಂದಸ್ವಾಮಿ, ಶಿವನಾಗಮ್ಮ ಅವರ ಹಿರಿಯ ಪುತ್ರ ಕುಮಾರಸ್ವಾಮಿ ಎಂಬುವವರ ಪತ್ನಿ ರೂಪಾ ಈ ಕೃತ್ಯ ಎಸೆಗಿದ್ದಾಳೆ.
ಸೊಸೆ ತನ್ನ ಪಾಲನ್ನು ಹಲವು ವರ್ಷಗಳಿಂದ ಕೇಳುತ್ತಿದ್ದಳು. ಆದರೆ, ಅತ್ತೆ-ಮಾವ ಆಸ್ತಿ ಪಾಲು ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ಕೋಪಗೊಂಡ ಸೊಸೆ 40ಕ್ಕೂ ಅಧಿಕ ಮರಗಳನ್ನು ಕಡಿದಿದ್ದಾರೆ. ಈಗ ಸೊಸೆಯ ಮೇಲೆ ಮಾವ ದೂರು ನೀಡಿದ್ದಾರೆ. ಸೊಸೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಮ್ಮ ಹತ್ತಿರವೇ 8 ಲಕ್ಷ ರೂ. ಪಡೆದು ಮನೆ ಕಟ್ಟಿಸಿಕೊಂಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.