ಲಕ್ನೋ: ಕಡಿಮೆ ರನ್ ಗಳಿಸಿದರೂ ಬೌಲರ್ ಗಳ ಚಮತ್ಕಾರದ ನೆರವಿನಿಂದಾಗಿ ಲಕ್ನೋ ತಂಡ ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಹೀಗಾಗಿ ರನ್ ವೇಗ ಕಡಿಮೆಯಾಯಿತು. ನಾಯಕ ರಾಹುಲ್ ಹಾಗೂ ಇನ್ನಿತರ ಆಟಗಾರರು ತಾಳ್ಮೆಯ ಆಟವಾಡಿದರು. ಎಲ್ಲೂ ಕೂಡ ಹೊಡಿ ಬಡಿ ಆಟ ಕಾಣಲಿಲ್ಲ. ಪರಿಣಾಮವಾಗಿ ತಂಡವು 20 ಓವರ್ ಗಳಲ್ಲಿ 183 ರನ್ ಗಳಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡಕ್ಕೂ ಆರಂಭಿಕ ಆಘಾತ ಎದುರಾಯಿತು.
ಸ್ಟೊಯಿನಿಸ್ ಆಕರ್ಷಕ ಅರ್ಧಶತಕ, ಯಶ್ ಠಾಕೂರ್ ಹಾಗೂ ಕೃನಾಲ್ ಪಾಂಡ್ಯ ಅಬ್ಬರದ ಬೌಲಿಂಗ್ ದಾಳಿ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 33 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಟೈಟಾನ್ಸ್ ತಂಡ 130 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. 164 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ 18.5 ಓವರ್‌ಗೆ 130 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.