ಲಕ್ನೋ: ಸಮಾಜದ ಭದ್ರತೆಗೆ ಧಕ್ಕೆ ಮಾಡಿದವಯಾರೇ ಧಕ್ಕೆ ತಂದರೂ ಅವರ ‘ರಾಮ ನಾಮ ಸತ್ಯ’ (ಅಂತ್ಯಸಂಸ್ಕಾರ) ನಿಶ್ಚಿತ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ಅಲಿಗಢದಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಪರ ಬೃಹತ್ ಚುನಾವಣಾ ರ್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಮಹಿಳೆಯರು ಹಾಗೂ ವ್ಯಾಪಾರಸ್ಥರು ಯಾವುದೇ ಆತಂಕವಿಲ್ಲದೆ ರಾತ್ರಿಯಲ್ಲಿ ಹೊರಗೆ ಹೋಗಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಹೆಣ್ಣುಮಕ್ಕಳು ಮತ್ತು ಉದ್ಯಮಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವವರಿಗೆ ನಾವು ‘ರಾಮ್ ನಾಮ್ ಸತ್ಯ’ (ಅಂತ್ಯ ವಿಧಿಗಳನ್ನು ಮಾಡಲಾಗುತ್ತದೆ) ಖಾತ್ರಿ ಮಾಡಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮ ಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ. ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಎಂದು ಹೇಳಇದ್ದಾರೆ.