ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ವಿರುದ್ಧದ ಅಭಿಮಾನಿಗಳ ಆಕ್ರೋಶ ಕಡಿಮೆಯಾಗುತ್ತಿಲ್ಲ. ಈ ವೇಳೆ ಗೇಲಿ ಮಾಡದಂತೆ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಮನವಿ ಮಾಡಿದ್ದಾರೆ.
ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೂಡ ಮುಂಬಯಿ ಸೋಲು ಕಂಡಿದೆ. ಈ ವೇಳೆ ಮಾಜಿ ನಾಯಕ ರೋಹಿತ್ ಶರ್ಮಾ ಈರೀತಿ ಮಾಡದಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಮುಂಬೈ ತಂಡ ಫೀಲ್ಡಿಂಗ್ ಗೆ ಇಳಿದ ಸಂದರ್ಭದಲ್ಲಿ ಅಭಿಮಾನಿಗಳು ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದರು. ಆಗ ರೋಹಿತ್ ನಿಲ್ಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕೈಸನ್ನೆ ಮೂಲಕ ಹಾರ್ದಿಕ್ ವಿರುದ್ಧ ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು.
ವೇಗಿ ಟ್ರೆಂಟ್ ಬೌಲ್ಟ್ ಅವರ ಡೈನಾಮಿಕ್ ಸ್ಪೆಲ್ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಸ್ಪಿನ್ ಬೌಲಿಂಗ್‌ನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದೆ.
ರಾಯಲ್ಸ್ ಟಾಸ್ ಗೆದ್ದು ಬೌಲ್ ಆಯ್ಕೆ ಮಾಡಿಕೊಂಡಿತ್ತು. ಬಿಗಿ ಬೌಲಿಂಗ್ ನಿಂದಾಗಿ ಮುಂಬೈ ತಂಡವನ್ನು ಕೇವಲ 125 ರನ್ ಗಳಿಗೆ ಆಲೌಟ್ ಮಾಡಿತ್ತು. ರಿಯಾನ್ ಪರಾಗ್ ಅವರ ಅಜೇಯ 54 ರನ್ ಗಳ ನೆರವಿನಿಂದ ರಾಜಸ್ಥಾನ ಗೆದ್ದು ಬೀಗಿತು. ಮುಂಬೈಗೆ ಇದು ಮೂರನೇ ಸೋಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಸತತ ಮೂರನೇ ಗೆಲುವಿನೊಂದಿಗೆ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ.