ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯನ್ನು ಪಾಪಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ.
ಪಾಗಲ್ ಪ್ರೇಮಿ ತನ್ನ ಪ್ರಿಯತಮೆಯನ್ನು 25ಕ್ಕೂ ಅಧಿಕ ಬಾರಿ ಇರಿದು ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಘಟನೆ ಜಯನಗರದಲ್ಲಿ ನಡೆದಿದೆ. ಫರಿದಾ ಖಾತೂನ್ ಕೊಲೆಯಾದ ಮಹಿಳೆ. ಗಿರೀಶ್ ಅಲಿಯಾಸ್ ರೆಹಾನ್ ಕೊಲೆ ಮಾಡಿರುವ ಭಗ್ನ ಪ್ರೇಮಿ. 22 ವರ್ಷದ ಮಗಳಿರುವ ಮಹಿಳೆಯನ್ನೇ ಈತ ಪ್ರೀತಿಸಿದ್ದ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ 42 ವರ್ಷದ ಫರಿದಾ, ತನ್ನ ಗಂಡನಿಗೆ ಡಿವೋರ್ಸ್ ನೀಡಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಸಿ ಹೊಸ ಜೀವನ ಸಾಗಿಸುತ್ತಿದ್ದರು. ಇವರಿಗೆ 22 ವರ್ಷದ ಮಗಳು ಕೂಡ ಇದ್ದಾಳೆ. ಮೂಲತಃ ಬೆಂಗಳೂರಿನ ಯಡಿಯೂರು ನಿವಾಸಿಯಾಗಿರುವ 32 ವರ್ಷದ ಗಿರೀಶ್ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮಸಾಜ್ ಮಾಡಿಸಿಕೊಳ್ಳಲು ಸ್ಪಾಗೆ ಹೋದ ಸಂದರ್ಭದಲ್ಲಿ ಇಬ್ಬರ ಮಧ್ಯೆ ಪರಿಚಯವಾಗಿದೆ. ಆ ಪರಿಚಯ ಸ್ನೇಹಕ್ಕೆ ತಿರುಗಿದೆ. ಅಂದಿನಿಂದ ಫರಿದಾ ಜೊತೆಗೆ ಗಿರೀಶ್ ಆಪ್ತತೆ ಬೆಳೆಸಿದ್ದ. ಅಲ್ಲದೆ ಇವರ ನಡುವೆ ದೈಹಿಕ ಸಂಪರ್ಕ ಸಹ ಆಗಿತ್ತು.
ಮದುವೆಯಾಗಿ ಗಂಡನಿಂದ ಡಿವೋರ್ಸ್ ಪಡೆದಿದ್ದ ಫರಿದಾಗೆ ಗಿರೀಶ್ ಮದುವೆಯಾಗುವಂತೆ ಪೀಡಿಸುತ್ತಿದ್ದ. ಡಿವೋರ್ಸ್ ಬಳಿಕ ಗಂಡ ತೀರಿಕೊಂಡ ನೋವು ಹಾಗೂ ತನಗೆ 22 ವರ್ಷದ ಮಗಳಿದ್ದಾಳೆ ಎಂಬ ಭಯದಲ್ಲಿದ್ದ ಫರಿದಾ, ಮದುವೆಯಾಗಲು ನಿರಾಕರಿಸಿದ್ದಳು. ಮಾರ್ಚ್ 6 ರಂದು ಫರಿದಾ ತನ್ನ ಮಗಳನ್ನು ಕಾಲೇಜಿಗೆ ಸೇರಿಸುವ ಉದ್ಧೇಶದಿಂದ ಕೋಲ್ಕತ್ತಾಗೆ ತೆರಳಿದ್ದರು. 29 ರಂದು ಗಿರೀಶ್ನ ಹುಟ್ಟುಹಬ್ಬ ಇತ್ತು. ಹೀಗಾಗಿ 28ರಂದು ಫರಿದಾ ಫ್ಲೈಟ್ ನಲ್ಲಿ ಬೆಂಗಳೂರಿಗೆ ಹಿಂತಿರುಗಿದ್ದಳು. ಇಬ್ಬರೂ ಸೇರಿ 29 ರಂದು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿದ್ದರು. ಜೆಪಿ ನಗರದ ಓಯೋ ರೂಂ ನಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಇಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ನಡೆದು, ಮಾರ್ಚ್ 30 ರಂದು ಫರಿದಾಳನ್ನು ಕರೆದುಕೊಂಡು ಹತ್ತಿರದ ಶಾಲಿನಿ ಗ್ರೌಂಡ್ ಗೆ ಬಂದಿದ್ದ. ಆಕೆಯನ್ನ ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿ ಚಾಕು ಖರೀದಿಸಿದ್ದಾನೆ. ಆ ವೇಳೆ ಮದುವೆ ಆಗೋಣ. ಈ ಕೆಲಸ ಬಿಡು ಎಂದು ಹೇಳಿದ್ದಾನೆ. ಮಾತಿಗೆ ಮಾತು ಬೆಳೆದು ತಾಣಕ್ಕಾಗಿ. ತನ್ನ ಮಾತಿನಂತೆ ನಡೆದುಕೊಳ್ಳಲು ಫರೀಧಾ ಒಪ್ಪದಿದ್ದಾಗ, ಮೊದಲೇ ತಂದಿದ್ದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೆ ದೇಹದ ವಿವಿಧೆಡೆ ಸುಮಾರು 25ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಬಂದು ಗಿರೀಶ್ ಶರಣಾಗಿದ್ದಾನೆ ಎನ್ನಲಾಗಿದೆ.
ಗಿರೀಶ್ ಈ ಹಿಂದೆ ಫರಿದಾಳ ಪರಿಚಯಕ್ಕೂ ಮುನ್ನ 2011ರಲ್ಲಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದ. ಮೂರ್ತಿ ಪೂಜೆ ವಿರೋಧಿಸಿ ಮಸೀದಿಗೆ ತೆರಳಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ‘ರೆಹಾನ್’ ಎಂದು ಹೆಸರು ಬದಲಿಸಿಕೊಂಡಿದ್ದ. ಆಗ ಮನೆಯಲ್ಲಿ ಸಮಸ್ಯೆ ಉದ್ಭವವಾಗಿತ್ತು. ಆತನಿಗೆ ಹಾಗೂ ಆತನ ಸಹೋದರಿಗೆ ವರ ಸಿಗುತ್ತಿರಲಿಲ್ಲ. ಹೀಗಾಗಿ ಮತ್ತೆ ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಎನ್ನಲಾಗಿದೆ.