ಎಸ್! ಕಳೆದ ನಾಲ್ಕೈದು ವರ್ಷಗಳಿಂದ ಈಗ ಶುರು-ಆಗ ಶುರು ಎನ್ನುತ್ತಲೇ ಹೈಪ್ ಕ್ರಿಯೇಟ್ ಮಾಡಿಕೊಂಡ ಸಿನಿಮಾ ‘ಬಿಲ್ಲಾ ರಂಗ ಭಾಷಾ’. ಅಸಲಿಗೆ ಇದು ಕಿಚ್ಚ ಸುದೀಪ್ ನಿರ್ಮಾಣದ ಸಿನಿಮಾ. ಇಲ್ಲಿ ಕಿಚ್ಚ ನಿರ್ಮಾಣದ ಜೊತೆ ಹೊಸ ಗೆಟಪ್ಪುಗಳ ಮೂಲಕ ವಿಭಿನ್ನವಾಗಿ ತೆರೆ ಏರೋಕೆ ರೆಡಿಯಾಗಿದ್ದ ಸಿನಿಮಾ. ಅಸಲಿಗೆ ಸುದೀಪ್ ಮತ್ತು ಅನೂಪ್ ಭಂಡಾರಿ ಜೊತೆಯಾಗಿ ಈ ವಿಭಿನ್ನ ಟೈಟಲ್ಲಿನ ಸಿನಿಮಾ ಮಾಡುತ್ತಾರೆಂದಾಗಲೇ, ಸಖತ್ ಸುದ್ದಿ ಮಾಡಿತ್ತು. ಬರಿಯ ಸುದ್ದಿಗಷ್ಟೇ ಸೀಮಿತಗೊಳಿಸಿದ ಚಿತ್ರತಂಡ ಮೂಂದೆಂದೂ ಅದರ ಅಪ್ಡೇಟ್ಸ್ ಕೋಡಲೇ ಇಲ್ಲ. ಕೊನೆಗೆ ಸುದ್ದಿ ತೇಲಾಡಿ ವರ್ಷಗಳು ಉರುಳುತ್ತಲೇ ಹೋದರೂ, ಚಿತ್ರ ಸೆಟ್ಟೇರಲೇ ಇಲ್ಲ. ಅತ್ತ ಇದೇ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಜೋಡಿಯ ‘ವಿಕ್ರಾಂತ ರೋಣ’ ತೆರೆಕಂಡಿತು. ಇದುಹೇಳಿಕೊಳಾಳುವ ಕಥೆ ಇಲ್ಲದೆ, ರಕ್ಕಮ್ಮನಿಂದಲೇ ಹೆಚ್ಚು ಗುಡುಗಿತಾದರೂ, ಚಿತ್ರ ಅಂದುಕೊಂಡಂಥ ಮಟ್ಟಕ್ಕೆ ಸರಿಹೋಗಲಿಲ್ಲ. ಪ್ರೇಕ್ಷಕ ಪ್ರಭುಗಳು ಮಿಶ್ರ ಪ್ರತಿಕ್ರಿಯೆ ಕೊಟ್ಟು ಚಿತ್ರವನ್ನ ಗೆಲುವಿನತ್ತ ತೇಲಿಸಿಬಿಟ್ಟರು. ಅಲ್ಲಿಗೆ ‘ರಂಗೀತರಂಗ’ ಸೂಪರ್ ಹಿಟ್ ನಂತರ ಮತ್ತೊಂದು ಹಿಟ್ ಕೊಡಲು ತಿಣುಕಾಡುತ್ತಿದ್ದ ನಿರ್ದೇಶಕ ಅನೂಪ್ ಭಂಡಾರಿಗೆ ವಿಕ್ರಾಂತ ರೋಣದ ಗೆಲುವು ಜೀವಜಲ ಸಿಕ್ಕಂತಾಗಿತ್ತು. ಈ ಗೆಲುವಿನ ಘಳಿಗೆಯಲ್ಲೇ- ಭಂಡಾರಿ ಕಿಚ್ಚ ಜೋಡಿ ‘ಬಿಲ್ಲಾ ರಂಗ ಬಾಷಾ ‘ ಕೈಗೆತ್ತಿಕೊಳ್ಳಬಹುದೆಂಬ ನಿರೀಕ್ಷೆ ಸುಳ್ಳಾಗಿತ್ತು. ಸುದೀಪ್ ಮುಂದೆ ಕಬ್ಜ, ಮ್ಯಾಕ್ಸ್,ಸಿಸಿಎಲ್, ಬಿಗ್ ಬಾಸ್ನಲ್ಲಿ ಬ್ಯುಸಿ ಆದರೂ, ಈ ನಡುವೆ ‘ಕೆಕೆ’ ಎನ್ನುವ ಶೀರ್ಷಿಕೆ ಇಟ್ಟು ಹತ್ತು ವರ್ಷದ ನಂತರ ಖುದ್ದು ತಾನೇ ನಿರ್ದೇಶನ ಮಾಡುವ ಬಗ್ಗೆ ಅನೌನ್ಸ್ ಮಾಡಿಕೊಂಡರು. ಕಬ್ಜ ತಂಡದ ನಿರ್ದೇಶನ ತಂಡ, ಬರಹಗಾರರು, ತಂತ್ರಜ್ಞರನ್ನ ಕೂಡಿಕೊಂಡು ಕೆಕೆ ಸ್ಕ್ರಿಪ್ಟ್ ಮುಗಿಸಿಕೊಂಡರು. ಇವೆಲ್ಲದ ನಡುವೆ ಬಹು ಬಡ್ಜೆಟ್ ಬೇಡುವ ಬಿಲ್ಲಾ ರಂಗ ಬಾಷಾ ಸೈಡ್ ಲೈನ್ ಆಗಿತ್ತು.
ಇದೀಗ ಮರು ಚಾಲನೆ ದೊರೆಂತಾಗಿದ್ದು, ಚಿತ್ರದ ಬರವಣಿಗೆ ಕೆಲಸಗಳು ಚುರುಕುಗೊಂಡಿವೆ. ಈ ಬಗ್ಗೆ ಆಸ್ಕ್ ಕಿಚ್ಚಾ ಎಂಬ ಶೀರ್ಷಿಕೆಯ ಆಭಿಯಾನದಡಿ ಅಭಿಮಾನಿ “ಯಾವಾಗ ಬಿಲ್ಲಾ ರಂಗ ಭಾಷಾ” ಎಂದು ಕೇಳಲಾದ ಪ್ರಶ್ನೆಗೆ ಸ್ಪಂದಿಸಿದ ಕಿಚ್ಚ, 2024* ಎನ್ನುವ ಮೂಲಕ, ಈ ವರ್ಷ ಭಾಷಾ ಎಂಟ್ರಿ ಕನ್ಫರ್ಮ್ ಮಾಡಿದ್ದಾರೆ.