ಬೆಂಗಳೂರು: ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಕುರಿತ ವಿಧೇಯಕ ಇತ್ತೀಚೆಗೆ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಹೀಗಾಗಿ ಶಾಲಾ ಕ್ಯಾಂಪರ್ ನಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಅಕ್ಕಪಕ್ಕದ ಕಾಂಡಿಮೆಂಟ್ಸ್ ಹಾಗೂ ಬೀಡಾ ಸ್ಟಾಲ್‌ಗಳ ಮೇಲೆ ದಕ್ಷಿಣ ವಿಭಾಗದ ಪೊಲೀಸರ ದಾಳಿ ನಡೆಸಿದ್ದಾರೆ.
ದಕ್ಷಿಣ ವಿಭಾಗದ 243 ಅಂಗಡಿಗಳಲ್ಲಿ ಮಾದಕ ವಸ್ತು ಮಾರಾಟದ ಕುರಿತು ಪರಿಶೀಲನೆ ನಡೆಸಿದ್ದು, ನಿಯಮ ಬಾಹಿರವಾಗಿ ಸಿಗರೇಟ್ ಮಾರುತ್ತಿದ್ದ 19 ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. 78 ಅಂಗಡಿ ಮಾಲೀಕರಿಗೆ ದಕ್ಷಿಣ ವಿಭಾಗದ ಪೊಲೀಸರು ದಂಡ ಹಾಕಿದ್ದಾರೆ.
ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಮತ್ತು ಸರಬರಾಜು ತಿದ್ದುಪಡಿ ವಿಧೇಯಕವನ್ನು ಸಚಿವ ದಿನೇಶ್ ಗುಂಡೂರಾವ್ ಮಂಡನೆ ಮಾಡಿದ್ದು, ಹುಕ್ಕಾ ಬಾರ್‌ಗಳನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬಾರದು ಅಂತಿದೆ. ಆದರೆ, ಅನೇಕ ಬಾರ್ ಮತ್ತು ರೆಸ್ಟೋರೆಂಟ್‌ಗಳು ಹುಕ್ಕಾ ಬಾರ್ ಆರಂಭಿಸಿವೆ ಎಂಬ ಆರೋಪ ಕೇಳಿ ಬಂದಿವೆ. ಈ ಹಿಂದೆ ಕಾನೂನಿನಲ್ಲಿ, 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ಮಾರಕೂಡದು ಎಂಬ ನಿಯಮ ಇತ್ತು. ಅದನ್ನು 21 ವರ್ಷಕ್ಕೆ ಏರಿಸಲಾಗಿದೆ. ನಿಿಮಗಳ ಪ್ರಕಾರ ಶಾಲಾ – ಕಾಲೇಜುಗಳ ಸುತ್ತ ನೂರು ಮೀಟರ್ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು ಅಂತ ನಿಯಮ ಇದೆ.