ಕಾಂಗ್ರೆಸ್ ನಲ್ಲಿ ಕುದಿಯುತ್ತಿದೆ ಒಳಬೇಗುದಿ!!
ಯೆಸ್..ಇದು ಕಾಂಗ್ರೆಸ್ ಒಳಬೇಗುದಿ ಕುದಿಯುತ್ತಿದೆ ಎಂಬುವುದಕ್ಕೆ ಪುಷ್ಠಿ ನೀಡ್ತಾ ಇದೆ. ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಅನ್ನೋದು ಇಂಥ ಹೇಳಿಕೆಗಳಿಂದ ಸಾಬೀತಾಗ್ತಾನೆ ಇದೆ. ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತಿದೆ ಅನ್ನೋದಕ್ಕೆ ಇಂಬು ನೀಡುತ್ತಿದೆ. ಹಾಗಾದರೆ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದಂಥ ಪರಸ್ಥಿತಿ ಇರೋದು ನಿಜ ಅಂದಂಗಾಯ್ತು. ಇದನ್ನು ಮಾತಾಡೋಕೆ ಮುನ್ನ ಚುನಾವಣಾ ಪ್ರಚಾರ ಭಾಷಣದಲ್ಲಿ ಗುಬ್ಬಿ ಕಾಂಗ್ರೆಸ್ ಶಾಸಕರೇನು ಹೇಳಿದ್ರು ಅನ್ನೋದನ್ನ ಇನ್ನೊಮ್ಮೆ ಕೇಳಿಬಿಡೋಣ.
ಎಸ್.ಆರ್. ಶ್ರೀನಿವಾಸ್ ಈ ಹೇಳಿಕೆಯನ್ನು ಬೇಸರದಿಂದ ಹೇಳಿದ್ದಾರೋ? ಅಥವಾ ನೋವಿನಲ್ಲಿ ಹೇಳಿದ್ದಾರೋ? ಗೊತ್ತಿಲ್ಲ. ಕಾಂಗ್ರೆಸ್ ಗೆ ಅಧಿಕಾರ ಸಿಗುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಸ್ಥಾನಕ್ಕಾಗಿ ಫೈಟ್ ನಡೆದಿತ್ತು. ಕೊನೆಗೂ ಹೈಕಮಾಂಡ್ ಸಿದ್ದರಾಮಯ್ಯರಿಗೆ ಆ ಸ್ಥಾನ ನೀಡಿತ್ತು. ಉಭಯ ನಾಯಕರು ಅರ್ಧರ್ಧ ಅವಧಿಗೆ ಸಿಎಂ ಸ್ಥಾನ ಹಂಚಿಕೊಳ್ಳುವ ಅಂಡರ್ ಸ್ಟಾಂಡಿಂಗ್ ಗೆ ಬಂದಿದ್ರು ಅನ್ನೋದು ರಾಜಕೀಯ ವಲಯದಲ್ಲಿ ಈಗಾಗಲೇ ಜನಜನಿತವಾದ ಮಾತು.
ಈಗ ಶ್ರೀನಿವಾಸ್ ಹೇಳಿಕೆಯಂತೆ ಕಾಂಗ್ರೆಸ್ ನಲ್ಲಿ ಏನಾದರೂ ಒಪ್ಪಂದ ಆಗಿತ್ತೆ? ಎಂಬ ಸಂಶಯ ಮೂಡುತ್ತಿದೆ. ಹಾಗಾದರೆ ಲೋಕಸಭೆ ಗೆದ್ದರೆ ಮಾತ್ರ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆಯಾತ್ತಾರಾ? ಒಂದು ವೇಳೆ ಕಾಂಗ್ರೆಸ್ ಸೋತರೆ ಡಿಕೆಶಿ ಸಿಎಂ ಆಗುತ್ತಾರಾ? ಗೊತ್ತಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ರು ನೋಡೋಣ.
ಮುಖ್ಯಮಂತ್ರಿ ಸಿದ್ದರಾಮಯ್ಯಅವರೇನೋ ತಮಗೆ ಈ ಬಗ್ಗೆ ಏನೂ ಗೊತ್ತೇ ಇಲ್ಲವೇನೋ ಎಂಬಂತೆ ವರ್ತಿಸಿದ್ದಾರೆ, ವಾಸ್ತವವಾಗಿ ಅವರಿಗೂ ಅಳುಕಿದೆ ಅನ್ನೋದು ಇದರಿಂದ ಗೊತ್ತಾಗುತ್ತೆ. ಯಾಕಂದ್ರೆ ಡಿಕೆಶಿ ಬೆಂಬಲಿಗ ಶಾಸಕರಾದ ರವಿ ಗಣಿಗ, ಕುಣಿಗಲ್ ಶಾಸಕ ಡಾ.ರಂಗನಾಥ್, ಶಿವಗಂಗಾ ಬಸವರಾಜ್ ಸೇರಿದಂತೆ ಹಲವು ಶಾಸಕರು ಡಿಕೆಶಿ ಪರ ಬಹಿರಂಗವಾಗೇ ದನಿ ಎತ್ತಿದ್ದರು. ಇದೇ ಅವಧಿಯಲ್ಲೇ ಡಿಕೆಶಿ ಸಿಎಂ ಆಗ್ತಾರೆ ಅನ್ನೋದು ಇವರ ಅಚಲ ವಿಶ್ವಾಸ.
ಕಾಂಗ್ರೆಸ್ ಪಕ್ಷದಲ್ಲೇ ಎರಡು ಮನಸ್ಥಿತಿ…. ಸಿದ್ದರಾಮಯ್ಯ ಬೆಂಬಲಿಗರಲ್ಲಿ ಆತಂಕ… ಡಿಕೆಶಿ ಬೆಂಬಲಿಗರಲ್ಲಿ ವಿಶ್ವಾಸ… ಈ ಎರಡು ಮನಸ್ಥಿತಿಗಳ ನಡುವೆ ರಾಜ್ಯ ಕಾಂಗ್ರೆಸ್ ಪಕ್ಷ ಆಂತರಿಕ ಒಳಬೇಗುದಿಯಲ್ಲಿ ಬೇಯುತ್ತಿದೆ ಎಂಬುದು ಮಾತ್ರ, ಓಪನ್ ಸೀಕ್ರಟ್ ಅನ್ನೋದು ಸುಳ್ಳಲ್ಲ.