ಹೈದ್ರಾಬಾದ್ ಲೋಕಸಭಾ ಕ್ಷೇತ್ರ ಹಲವು ವಿಚಾರಗಳಿಗೆ ಗಮನ ಸೆಳೆಯುತ್ತೆ. ಸದ್ಯ AIMIM ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಪ್ರತಿನಿಧಿಸ್ತಾ ಇರೋ ಕ್ಷೇತ್ರ. 2004ರಿಂದ ಸತತವಾಗಿ ಗೆಲ್ಲುತ್ತಿರೋ ಓವೈಸಿ ಇಲ್ಲಿ 5ನೇ ಬಾರಿಗೆ ಕಣಕ್ಕೆ ಇಳಿಯಲಿದ್ದಾರೆ. ಈ ಹಿಂದೆ ಇವರ ತಂದೆ ಸಲಾಹುದ್ದೀನ್ ಓವೈಸಿ 1984ರಿಂದ ಸತತವಾಗಿ ಆರು ಬಾರಿ ಗೆದ್ದಿದ್ರು. ಹೀಗಾಗಿ ಹೈದ್ರಾಬಾದ್ ಲೋಕಸಭಾ ಕ್ಷೇತ್ರ ಈ ಕುಟುಂಬದ ಭದ್ರ ಕೋಟೆಯಗಿದೆ. ಇಂಥ ಕೋಟೆ ಕಬ್ಜಾ ಮಾಡಲು ಈ ಬಾರಿ ಲಗ್ಗೆಯಿಟ್ಟಿದ್ದಾರೆ ಮಾಧವಿ ಲತಾ.
‘ಮಾಧವಿ ಲತಾ’ ಬಿಜೆಪಿ ಟಿಕೆಟ್ ಪಡೆದು ಕಣಕ್ಕಿಳಿದಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಹೈದ್ರಾಬಾದ್ ಹಾಗೂ ಸುತ್ತಮುತ್ತಲಿನ ಹಲವು ಕ್ಷೇತ್ರಗಳಲ್ಲಿ ಬಿಜಿಪಿ ತನ್ನ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ7ರಷ್ಟು ಮತ ಪಡೆದಿದ್ದ ಬಿಜೆಪಿ 2023ರಲ್ಲಿ ನಡೆದ ವಿಧಾನಸಭಾ ಚುನಾವನೆಯಲ್ಲಿ ತನ್ನ ಮತವನ್ನು ಶೇ15ಕ್ಕೆ ಏರಿಸಿಕೊಂಡಿತ್ತು. ಓವೈಸಿ ಕುಟುಂಬದ ಭದ್ರ ಕೊಟೆಯಾಗಿರೋ ಈ ಕ್ಷೇತ್ರದಲ್ಲಿ ಶೇ.60ರಷ್ಟು ಮುಸ್ಲಿಂ ಮತದಾರರಿದ್ದಾರೆ. ಹಾಗಾಗಿ ಮಾಧವಿ ಲತಾಗೆ ಈ ಕ್ಷೇತ್ರ ಕಬ್ಬಿಣದ ಕಡಲೆ ಅನ್ನೋದು ಸುಳ್ಳಲ್ಲ. ಆದ್ರೆ, ಮಾಧವಿ ಲತಾ ಈ ಬಾರಿ ಆಶ್ಚರ್ಯಕರ ರಿತಿಯಲ್ಲಿ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ತ್ರಿವಳಿ ತಲಾಖ್ ವಿರೋಧಿಸಿ ಮುಸ್ಲಿಂ ಮಹಿಳೆಯರನ್ನು ಸಂಘಟಿಸಿದ್ದೇನೆ. ಅವರ ಪರ ದನಿ ಎತ್ತಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜಾತಿ ಮತ ನೋಡದೆ ಎಲ್ಲರ ಸಹಾಯಕ್ಕೆ ನಿಂತಿದ್ದೆ. ಇಲ್ಲಿರುವ ಮುಸ್ಲಿಮರ ಪೈಕಿ ಬಹುತೇಕರು ಅವಿದ್ಯಾವಂತರು ಹಾಗೂ ಬಾಲ ಕಾರ್ಮಿಕರು. ಇವರ ಬಡತನವನ್ನು ದುರುಪಯೋಗಪಡಿಸಿಕೊಂಡು, ಓವೈಸಿ ಇಲ್ಲಿ ಗೆಲ್ಲುತ್ತಿದ್ದಾರೆಯೇ ಹೊರತು, ಅವರ ಕ್ಷೇತ್ರದ ಅಭಿವೃದ್ದಿಗೆ ಏನೂ ಮಾಡಿಲ್ಲ’.
ಈ ರೀತಿ ಹೇಳುವ ಮೂಲಕ ಮುಸ್ಲಿಮರಿಮದಲೂ ತಮಗೆ ಬೆಂಬಲ ಸಿಗುತ್ತೆ ಅನ್ನೋ ವಿಶ್ವಾಸ ಮಾಧವಿ ಅವರದ್ದು. ಅಲ್ಲದೇ, ಕ್ಷೇತ್ರದಲ್ಲಿರುವ ಹಿಂದೂ ದೇವಾಲಯಗಳಿಗೆ ಸೂಕ್ತ ಭದ್ರತೆಯಿಲ್ಲ. ಇಲ್ಲಿನ ಹಿಂದೂಗಳು ಭಯದಿಂದ ಬದುಕುವಂಥಾ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ಹೋಗಲಾಡಿಸಲು ನಾನು ಸಾಕಷ್ಟು ದಿನದಿಮದ ಹೊರಾಡ್ತಾ ಇದ್ದೇನೆ. ಹಾಗಾಗಿ ಹಿಂದೂಗಳ ಬೆಂಬಲವೂ ತನಗೆ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಮಾಧವಿ ಲತಾ.
ಇಷ್ಟೆಲ್ಲಾ ಹಿನ್ನೆಲೆ ಇರೋ ಮಾಧವಿ, ಪ್ರಖರ ಹಿಂದೂವಾದಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಮುಖ್ಯವಾಗಿ ಹಳೆ ಹೈದ್ರಾಬಾದ್ ಪ್ರದೇಶದಲ್ಲಿ ಹಿಂದೂ ಮೌಲ್ಯಗಳನ್ನು ಉಳಿಸುವ ಮತ್ತು ಹೀಂದೂ ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುವ ಕುರಿತಂತೆ ಸದಾ ದನಿ ಎತ್ತುತ್ತಲೇ ಇರುತ್ತಾರೆ.
ಇಂಥ ಮಾಧವಿ ಇದೀಗ ಓವೈಸಿಯಂಥ ಪ್ರಬಲ ಅಭ್ಯರ್ಥಿಯ ಎದುರು ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದ ಜನಸಂಖ್ಯೆಯೂ ಓವೈಸಿಗೆ ಪೂರಕವಾಗಿಯೇ ಇದೆ.
ಹೀಗೆ ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ, ಬಿಜೆಪಿ ಬಾವುಟ ಹಾರಿಸಲು ಮಾಧವಿ ಹೊರಟಿದ್ದಾರೆ. ಈ ಬಾರಿ ಅಲ್ಲಿಯ ಜನ ಒಂದು ವೇಳೆ ಧರ್ಮಾತೀತವಾಗಿ ಮಾಧವಿ ಅವರ ಕೈ ಹಿಡಿದರೆ, ಆಗ ಹೈದ್ರಾಬಾದಿನ ರಾಜಕೀಯ ಇತಿಹಾಸಕ್ಕೇ ಒಂದು ಹೊಸ ದಿಕ್ಕು ಸಿಕ್ಕಂತಾಗುತ್ತೆ. ಎಲ್ಲವನ್ನೂ ಕಾಲವೇ ನಿರ್ಧರಿಸಿಲಿದೆ.