ನವದೆಹಲಿ: ರಾಜಕಾರಣಿಯೊಬ್ಬಾತ ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಸ್ಸಾಂ ರಾಜಕಾರಣಿಯೊಬ್ಬಾತನ ಫೋಟೋಗಳೇ ವೈರಲ್ ಆಗಿರೋದು. ಅಸ್ಸಾಂನ ಉದಲಗಿರಿ ಜಿಲ್ಲೆಯ ಭೈರಗುರಿಯಲ್ಲಿ ಗ್ರಾಮ ಸಭೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೆಂಜಮಿನ್ ಬಾಸುಮತರಿ, 500 ರೂ. ನೋಟುಗಳನ್ನೇ ಹಾಸಿಗೆ ಮಾಡಿ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈತನ ಮೇಲೆ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಹಾಗೂ ನರೇಗಾ ಯೋಜನೆಯಲ್ಲಿ ಬಡ ಫಲಾನುಭವಿಗಳಿಂದ ಲಂಚ ಪಡೆದ ಆರೋಪ ಇದೆ. ಸದ್ಯ ಈ ಫೋಟೋ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷದ ಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೋ ಈ ವ್ಯಕ್ತಿಗೂ ಪಕ್ಷಕ್ಕೂ ಈಗ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈತನನ್ನು 2024ರ ಜನವರಿ 10 ರಂದು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಕಳೆದ ಐದು ವರ್ಷಗಳ ಹಿಂದೆ ಬಸುಮತರಿ ಅವರು ಪಾರ್ಟಿ ಮಾಡುತ್ತಿದ್ದಾಗ, ಸ್ನೇಹಿತರು ಈ ಫೋಟೋವನ್ನು ತೆಗೆದಿದ್ದಾರೆ ಮತ್ತು ನಂತರ ಈ ಫೋಟೋವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗಿತ್ತು ಎಂಬ ಆರೋಪ ಕೂಡ ಕೇಳಿ ಬಂದಿದೆ.