ಮಡಿಕೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಖದೀಮರು ಕೈ ಚಳಕ ತೋರಿಸಿದ್ದಾರೆ.
ಇಂದು ಮಡಿಕೇರಿಯ ಕುಶಾಲನಗರ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆಜಿ ಬೋಪಯ್ಯ ಅವರ ಪರ್ಸ್‌ಗಳು ಕೂಡ ಕಳ್ಳತನವಾಗಿವೆ. ಅಪ್ಪಚ್ಚು ರಂಜನ್ ಪರ್ಸ್ ನಲ್ಲಿ 25 ಸಾವಿರ ರೂ. ಹಾಗೂ ಬೋಪಯ್ಯ ಅವರ ಪರ್ಸ್ ನಲ್ಲಿ 17 ಸಾವಿರ ರೂ. ಇತ್ತು. ಇವರಿಬ್ಬರ ಜೊತೆಗೆ ಇನ್ನೂ ಹಲವರ ಪರ್ಸ್ ಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಸದ್ಯದ ಮಾಹಿತಿಯಂತೆ ಬರೋಬ್ಬರಿ 5 ಲಕ್ಷ ರೂ.ಗೂ ಅಧಿಕ ಮೊತ್ತದ ಹಣವನ್ನು ಖದೀಮರು ಕದ್ದಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಬೇಕಂತಲೇ ನೂಕು ನುಗ್ಗಲು ಸೃಷ್ಟಿಸಿ ಹಲವರ ಪರ್ಸ್ ಕಳ್ಳತನ ಮಾಡಲಾಗಿದೆ. ಮೊದಲೇ ಪ್ಲಾನ್ ಮಾಡಿ ಬಂದಿದ್ದ ತಂಡದಿಂದ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳ್ಳರ ಪತ್ತೆಗೆ ಮಡಿಕೇರಿ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.