ಬೆಂಗಳೂರು: ಹೋಟೆಲ್ ನಲ್ಲಿಯೇ ರೌಡಿಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಕಮ್ಮನಹಳ್ಳಿಯ ಓಯೋ ಹೋಟೆಲ್ ನಲ್ಲಿ ಬುಧವಾರ ಈ ಘಟನೆ ನಡೆದಿದೆ. ದಿನೇಶ್ ಮೃತ ರೌಡಿಶೀಟರ್. 7 ಜನ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ಸಂಬಂಧಪಟ್ಟಂತೆ ಹೋಟೆಲ್ ರಿಸಪ್ಷನಿಸ್ಟ್ ಮುರುಳೀಧರ್ ಪ್ರತಿಕ್ರಿಯೆ ನೀಡಿದ್ದು, “ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಈ ದುರ್ಘಟನೆ ನಡೆದಿದೆ. ಏಳು ಜನ ರೂಂ ಕೇಳಿಕೊಂಡು ಮೊದಲು ಆಗಮಿಸಿದ್ದರು. ಆನಂತರ ಅಮೌಂಟ್ ಕೇಳಿದಾಗ ಫೋನ್ ಪೇ ಮಾಡುವುದಾಗಿ ತಿಳಿಸಿದರು. ಫೋನ್ ಪೇ ಇಲ್ಲ, ಕ್ಯಾಶ್ ಕೊಡಿ ಎಂದು ನಾನು ಹೇಳಿದೆ. ತಕ್ಷಣ ಹಣ ತರೋದಕ್ಕೆ ಇಬ್ಬರು ಆಚೆ ತೆರಳಿದರು. ನಂತರ ಮತ್ತೆ ಐದು ಜನ ಬಂದು ಬ್ಯಾಗ್ ನಲ್ಲಿದ್ದ ಮಚ್ಚನ್ನು ತೆಗೆದು ದಿನೇಶ್ ಎಂಬುವವರ ಮೇಲೆ ಏಕಾ-ಏಕಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.