ನವದೆಹಲಿ: ಇಡಿ ಅಧಿಕಾರಿಗಳು ಕ್ಯಾಪ್ರಿಕೊರ್ನಿಯನ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿ ಮೇಲೆ ದಾಳಿ ನಡೆಸಿದ್ದು, ವಾಷಿಂಗ್ ಮಷೀನ್ ನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ದಾಖಲೆಗಳು, ಡಿಜಿಟಲ್ ಸಾಧನಗಳು ಪತ್ತೆಯಾಗಿವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಬೃಹತ್ ಕಾರ್ಯಾಚರಣೆ ನಡೆಸಿದೆ. ಫೆಮಾ ಕಾಯಿದೆ ಉಲ್ಲಂಘನೆಯ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಕೋಟ್ಯಾಂತರ ನಗದು ವಶಕ್ಕೆ ಪಡೆಯಲಿದೆ. ಇ.ಡಿ. ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿ ನೀಡಿದ್ದು, ವಾಷಿಂಗ್ ಮೆಷಿನ್‌ನಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಫೋಟೋ ಬಿಡುಗಡೆಗೊಳಿಸಿದೆ.
ಫೆಮಾ ಕಾಯಿದೆಯ ಉಲ್ಲಂಘನೆಯ ಆರೋಪದಲ್ಲಿ ಕ್ಯಾಪ್ರಿಕೊರ್ನಿಯನ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ ಮತ್ತು ಅದರ ನಿರ್ದೇಶಕರಾದ ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ ಮತ್ತು ಇದರ ಪಾಲುದಾರ ಘಟಕಗಳಾದ ಲಕ್ಷ್ಮಿಟನ್ ಮ್ಯಾರಿಟೈಮ್, ಹಿಂದೂಸ್ತಾನ್ ಇಂಟರ್ನ್ಯಾಷನಲ್, ರಾಜನಂದಿನಿ ಆವರಣದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.