ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹೃದಯದ ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅವರು ಚೆನ್ನೈನಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರು ಡಿಸ್ಚಾರ್ಜ್ ಆಗಿದ್ದು, ವಿಶೇಷ ವಿಮಾನದ ಮೂಲಕ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ, ಇದೊಂದು ಪುನರ್ಜನ್ಮ ಎಂದೇ ಹೇಳಬಹುದು. ನಾನು ಬದುಕಬೇಕೆಂದು ಅಸಂಖ್ಯ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಈಗ ಅವರ ಪ್ರಾರ್ಥನೆಯು ಫಲ ಕೊಟ್ಟಿದೆ. ‘ಸಾಯಿ ಬಾಬಾ’ ಬಂದು ಆಪರೇಷನ್ ಮಾಡಿದ್ದಾರೆ ಎಂದು ಸ್ವತಃ ವೈದ್ಯರೇ ಹೇಳಿದ್ದಾರೆ. ಈಗಾಗಲೇ ಜನರೊಂದಿಗೆ ಬೆರೆಯಲು ಆಗುವುದಿಲ್ಲ. ಇನ್ನೂ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಈ ಹೃದಯ ಚಿಕಿತ್ಸೆ ನನಗೆ ಮೂರನೇ ಬಾರಿ ಆಗಿದೆ. ವೈದ್ಯಲೋಕ ಹಲವಾರು ರೀತಿ ತಾಂತ್ರಿಕವಾಗಿ ಮುಂದುವರೆದೆ. ಈ ನಿಟ್ಟಲ್ಲಿ ನಾನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿಕೊಳ್ಳುವಂತಾಗಿದೆ, ಮೇಲಾಗಿ ವೈದ್ಯರು ಸಾಯಿಬಾಬಾ ಭಕ್ತರು. ಸಾಯಿಬಾಬನಿಗೆ ಪೂಜೆ ಸಲ್ಲಿಸಿ ಬಂದು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಹೀಗಾಗಿ ನಾನು ಬದುಕಿ ಬಂದಿದ್ದೇನೆ ಎಂದು ಕುಮಾಾಸ್ವಾಮಿ ಹೇಳಿದ್ದಾರೆ.