ಬೆಂಗಳೂರು: ಇತ್ತೀಚೆಗಷ್ಟೇ ನಗರದ ಕೊಡಿಗೆಹಳ್ಳಿಯಲ್ಲಿ ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದರೋಡೆಕೋರರನ್ನು ಪೊಲೀಸರು ಬಂಧಿಸವಲ್ಲಿಯ ಶಸ್ವಿಯಾಗಿದ್ದಾರೆ.
ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ, ಸೂರಜ್ ಬಂಧಿತ ಆರೋಪಿಗಳು. ಈ ಖದೀಮರು ಸಣ್ಣ ಸಣ್ಣ ಆಭರಣದ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ದೋಚುತ್ತಿದ್ದರು ಎನ್ನಲಾಗಿದೆ. ಖದೀಮರು ಸಣ್ಣ ಅಂಗಡಿಗಳಲ್ಲಿ ಕಡಿಮೆ ಜನ ಇರುತ್ತಾರೆಂದು ಅಂತಹ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಶೂಟೌಟ್ ಸಂದರ್ಭದಲ್ಲಿ ಅಚಾತುರ್ಯ ಮಾಡಿಕೊಂಡಿದ್ದು, ತಮ್ಮದೇ ಗುಂಪಿನ ಸದಸ್ಯ ಸೂರಜ್ ಎಂಬಾತನಿಗೆ ಗುಂಡು ಹಾರಿಸಿದ್ದಾರೆ. ಬಂಧಿತ ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಮತ್ತೋರ್ವ ಬಂಧಿತ ಆರೋಪಿ ಸೂರಜ್ ಕಾಲಿಗೆ ಗುಂಡೇಟು ಬಿದ್ದಿದೆ. ಸದ್ಯ ಸೂರಜ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಶು ಪಂಡಿತ್ ಹಾಗೂ ಖಾನಾ ಪಂಡಿತ್ ಮೇಲೆ 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದೇ ರೀತಿ ಮುಂಬೈನಲ್ಲಿಕಳ್ಳತನ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಈ ದುಷ್ಕರ್ಮಿಗಳಿಂದ ಗಾಯಗೊಂಡಿರುವ ಅಂಗಡೀ ಮಾಲೀಕರಾದ ಅಪ್ಪುರಾಮ್ ಹಾಗೂ ಆಸ್ಪತ್ರೆಗೆ ದಾಖಲಾಗಿದ್ದು, ಅಪ್ಪುರಾಮ್ ಸ್ಥಿತಿ ಗಂಭೀರವಾಗಿದೆ.