ಸಿಎಎ ವಿರುದ್ಧ ಮಾತನಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿವಿಲ್ ಲೈನ್ಸ್ ನಿವಾಸದ ಎದುರು ಪಾಕಿಸ್ತಾನಿ ಹಿಂದೂ, ಸಿಖ್ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದ್ದರು. ಪೌರತ್ವ ಕಾಯ್ದೆ ಅನುಷ್ಠಾನದ ವಿರುದ್ಧ ಕ್ಷಮೆ ಯಾಚಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಆದರೆ, ಕೇಜ್ರಿವಾಲ್ ಮತ್ತಷ್ಟು ಉದ್ಧಟತನದ ಮಾತುಗಳನ್ನಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಪ್ರತಿಭಟನಾಕಾರಾರು ಪಾಕಿಸ್ತಾನಿಗಳು. ಇವರೆಲ್ಲ ಜೈಲಿನಲ್ಲಿರಬೇಕು. ಇವರು ಬಿಜೆಪಿಯ ಮತ ಬ್ಯಾಂಕ್ ಎಂದು ಹೇಳುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಮಗೆ ಪೌರತ್ವ ನೀಡುತ್ತಿದ್ದರೆ, ಕೇಜ್ರಿವಾಲ್ ನಮಗೆ ಉದ್ಯೋಗ, ಮನೆ ಯಾರು ನೀಡುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. ಅವರಿಗೆ ನಮ್ಮ ನೋವು ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನಕಾರರ ಪೈಕಿ ಪಂಜುರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಿಗಳಿಗೆ ಪೂರ್ಣ ಪೊಲೀಸ್ ರಕ್ಷಣೆ ಹಾಗೂ ಗೌರವದೊಂದಿಗೆ ನನ್ನ ಮನೆಯ ಹೊರಗೆ ಪ್ರತಿಭಟಿಸಲು ಅವಕಾಶ ನೀಡಲಾಗಿದೆ. ಪಾಕಿಸ್ತಾನಿಗಳಿಗೆ ಹೇಗೆ ಭಾರಿ ಗೌರವ? ಎಂದು ಕೇಜ್ರಿವಾಲ್ ಪ್ರಶ್ನಿಸಿ, ಬಿಜೆಪಿಯು ಅಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಸಿಎಎ ಅಡಿ ಪೌರತ್ವ ನೀಡುವ ಮೂಲಕ ತನ್ನ ಮತ ಬ್ಯಾಂಕ್ ಸೃಷ್ಟಿಸಲು ಮುಂದಾಗಿದೆ. ಹೀಗೆ ಪೌರತ್ವ ಪಡೆಯುವವರಿಗೆ ಉದ್ಯೋಗ, ಮನೆಗಳನ್ನೂ ನೀಡಲಾಗುತ್ತದೆ. ಇದು ಸ್ಥಳೀಯರ ಮೇಲೆ ಪರಿಣಾಮ ಬೀರುತ್ತದೆ. ಇದು ಬಿಜೆಪಿಯ ವೋಟ್ ಬ್ಯಾಂಕ್ ಆಗಿ ಪರಿವರ್ತಿತವಾಗುತ್ತದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಹೀಗೆ ಪಾಕಿಸ್ತಾನಿ, ಬಾಂಗ್ಲಾ ಹಿಂದೂಗಳ ವಿರುದ್ಧ ಆರೋಪ ಮಾಡಿ, ಅವರನ್ನು ಜೈಲಿಗೆ ಅಟ್ಟಬೇಕು ಎಂದು ಉದ್ಧಟತನ ಮೆರೆದಿರುವ ಕೇಜ್ರಿವಾಲ್ ಗೆ ರೋಹಿಂಗ್ಯಾ ಮುಸ್ಲಿಂರ ಮೇಲೆ ಏಕೆ ಅಷ್ಟೊಂದು ಪ್ರೀತಿ? ಬೇರೆ ದೇಶದಿಂದ ಇಲ್ಲಿಗೆ ಬಂದವರಿಗೆ ಪೌರತ್ವ ನೀಡುವುದು ತಪ್ಪು ಎಂದು ಹೇಳುವ ಕೇಜ್ರಿವಾಲ್, 2022ರಲ್ಲಿ ಅಕ್ರಮ ವಲಸಿಗರಾದ ರೋಹಿಂಗ್ಯಾ ಮುಸ್ಲಿಂರಿಗೆ ಫ್ಲಾಟ್ ನೀಡಿ, ಮೂಲಭೂತ ಸೌಕರ್ಯ ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇಕೆ? ನಿಮ್ಮ ಮನಸ್ಥಿತಿ ಯಾರಿಗೆ ನ್ಯಾಯ ಕೊಡಿಸುವುದು ಇದೆ ಕೇಜ್ರಿವಾಲ್?